ಹುಬ್ಬಳ್ಳಿ: ಅಭಿವೃದ್ಧಿ ಹಾಗೂ ಜನಪರ ಆಡಳಿತದ ಪರಿಕಲ್ಪನೆಯೊಂದಿಗೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಎದುರಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಆಯೋಜಿಸಿದ್ದ ಮಹಾನಗರ ಪಾಲಿಕೆ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಂತಹ ಮಹತ್ವದ ಕೊಡುಗೆಯನ್ನು ನಮ್ಮ ಸರಕಾರ ನೀಡಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ನಗರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದರು.
70 ವರ್ಷ ದೇಶ ಆಳಿದ ಕಾಂಗ್ರೆಸ್‌ನವರು ನಿನ್ನೆ ಮಾತನಾಡಿದ್ದಾರೆ: ಬಿಜೆಪಿ ಪ್ರಣಾಳಿಕೆಯಲ್ಲಿ ಹೊಸ ಘೋಷಣೆಗಳನ್ನು ಮಾಡದೇ ಕಳೆದ ಬಾರಿಯ ಕೆಲ ಯೋಜನೆಗಳ ಪ್ರಸ್ತಾಪ ಮಾಡಲಾಗಿದೆ. ಅದನ್ನು ಬಿಟ್ಟರೆ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿ, ಮೂಲಸೌಕರ್ಯಕ್ಕೆ ಮಾತ್ರ ಒತ್ತು ನೀಡಲಾಗಿದೆ. 70 ವರ್ಷ ದೇಶ ಆಳಿದ ಕಾಂಗ್ರೆಸ್‌ನವರು ನಿನ್ನೆ ಮಾತಾಡಿದ್ದಾರೆ. ಇವರಿಗೆ ಕುಡಿಯುವ ನೀರಿನ ಯೋಜನೆ ಜಾರಿಗೆ ಮಾಡೋಕೆ ಆಗಲಿಲ್ಲ. ಜಗದೀಶ್ ಶೆಟ್ಟರ್ ಮಾಡಿದ್ದ ಪ್ರಾಜೆಕ್ಟ್ ಅನ್ನ ಅವರು ರಿಜೆಕ್ಟ್ ಮಾಡಿದರು. ನಮ್ಮ ಸರ್ಕಾರ ಬಂದಮೇಲೆ ಎಲ್ ಆ್ಯಂಡ್ ಟಿಗೆ ಕುಡಿಯುವ ನೀರಿನ ಯೋಜನೆ ನೀಡಿದ್ದೇವೆ ಎಂದು ಹೇಳಿದರು.
ಐಐಟಿ ರದ್ದಿಗೆ ಕಾರಣಕರ್ತ ಸಿದ್ದರಾಮಯ್ಯ: ಐಐಟಿ ಬಗ್ಗೆ ಮಾತನಾಡುವ ಕಾಂಗ್ರೆಸ್ ಸಿದ್ದರಾಮಯ್ಯನವರೇ ಇಲ್ಲಿ ಐಐಟಿ ಬರಬಾರದು ಅಂತ ಪತ್ರ ಬರೆದ ಮಹಾಪುರುಷರು. ಜನ ಯಾವಾಗ ಉತ್ತರ ಕೊಡಬೇಕೋ ಅವಾಗ ಉತ್ತರ ಕೊಡ್ತಾರೆ. ಕೈಗಾರಿಕೆಗಾಗಿ ಶೆಟ್ಟರ್ 5300 ಕೋಟಿ ರೂ. ಏಕಸ್ ಕಂಪನಿಗೆ ಕೊಟ್ಟಿದ್ದಾರೆ. ಧಾರವಾಡ ಶಿಕ್ಷಣ ಕಾಶಿ ಹಿನ್ನೆಲೆಯಲ್ಲಿ 13.50 ಕೋಟಿ ವೆಚ್ಚದಲ್ಲಿ ಹೊಸ ಹಾಸ್ಟೆಲ್ ಸಿದ್ಧವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ನ ಹಳೆ ಕಾಮಗಾರಿಗಳಿಂದ ಸಮಸ್ಯೆ: ಇನ್ನು ಹು-ಧಾ ಮಹಾನಗರ ಗುಂಡಿಗಳ ರಸ್ತೆ ಎಂಬ ಡಿಕೆಶಿ ರಸ್ತೆಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ರಸ್ತೆ ಕಾಮಗಾರಿ ಆರಂಭ ಮಾಡುತ್ತೇವೆ. ಬಿಆರ್ಟಿಎಸ್ ಒಂದೊಂದು ಕಡೆ ಸಮಸ್ಯೆ ಆಗಿದೆ. ಅದು ಫೆಲ್ಯೂರ್ ಅಂತ ಏನಿಲ್ಲ. 2018 ರಲ್ಲಿ ಕಾಂಗ್ರೆಸ್ ಮಾಡಿದ ಕಾಮಗಾರಿಯಿಂದ ಸಮಸ್ಯೆ ಆಗಿದೆ ಎಂದರು.
ಭೂತದ ಬಾಯಲ್ಲಿ ಭಗವದ್ಗೀತೆ: ಸಿಎಂ ಬದಲಾವಣೆ ವಿಚಾರವಾಗಿ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಕಾಂಗ್ರೆಸ್ನಲ್ಲಿ ಡಿಕೆಶಿ ಭ್ರಷ್ಟಾಚಾರದ ಬಗ್ಗೆ ಮತನಾಡೋದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗೆ ಎಂದು ವ್ಯಂಗ್ಯವಾಡಿದರು.