ETV Bharat / state

ಗುಪ್ಕಾರ್ ಗ್ಯಾಂಗ್ ದೇಶದ್ರೋಹಿ ಚಟುವಟಿಕೆಗೆ ರಾಜಕೀಯ ಪಕ್ಷಗಳ ಕೈವಾಡ; ಬಿಜೆಪಿ ನಾಯಕರ ಆರೋಪ - Gupkar Gang attack

ಅಸಹಿಷ್ಣುತೆ ಬಗ್ಗೆ ಮಾತನಾಡಿದವರು ಗುಪ್ಕಾರ್​ ಬಗ್ಗೆ ಚಕಾರ ಎತ್ತುತ್ತಿಲ್ಲ. ಅವಾರ್ಡ್ ವಾಪಸಿ ಗ್ಯಾಂಗ್ ಈ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಬೇಕು. ಆತ್ಮಸಾಕ್ಷಿ ಇದ್ದರೆ ಗುಪ್ಕಾರ್ ಗ್ಯಾಂಗ್ ಖಂಡಿಸಿ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ನಡೆಯನ್ನು ಖಂಡಿಸಿದ್ದಾರೆ.

BJP leaders reaction about Gupkar Gang
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
author img

By

Published : Nov 21, 2020, 4:47 PM IST

Updated : Nov 21, 2020, 8:01 PM IST

ಧಾರವಾಡ : ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇಂತಹ ದೇಹದ್ರೋಹಿ ಚಟಿವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ. ಈ ಗ್ಯಾಂಗ್ ಜೊತೆಗಿರುವ ಪಕ್ಷಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ಗುಪ್ಕಾರ್ ಗ್ಯಾಂಗ್ ದೇಶದ್ರೋಹಿ ಚಟುವಟಿಕೆ ಹಿನ್ನೆಲೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಅವರು, ಫಾರುಕ್ ಅಬ್ದುಲ್ಲಾ ಹಾಗೂ ಶೇಕ್ ಅಬ್ದುಲ್ಲಾ ಅವರು ಭಾರತದ ಹಿತವನ್ನು ಕಾಪಾಡದೇ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಇತ್ತ ಗಡಿ ಖ್ಯಾತೆ ತೆಗೆಯುವ ಚೀನಾದವರಿಗೆ ಮೋದಿ ತಕ್ಕ ಪಾಠವನ್ನು ಕಲಿಸುತ್ತಿದ್ದಾರೆ. ದೇಶದ ಬಗ್ಗೆ ಆತ್ಮಾಭಿಮಾನ ಇದ್ದವರು ಮೊದಲು ಚೀನಾ ಖ್ಯಾತೆಯನ್ನು ವಿರೋಧ ಮಾಡಬೇಕು ಎಂದು ದೇಶದಲ್ಲಿ ಈ ಹಿಂದೆ ನೀಡಲಾಗಿದ್ದ ಪಶಸ್ತಿಗಳನ್ನು ವಾಪಸ್ ಕೊಟ್ಟರುವರ ನಡೆಯನ್ನು ಪ್ರಶ್ನಿಸಿದರು.

ದೇಶವನ್ನು ಹಾಳು ಮಾಡುತ್ತಾ ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಗುಪ್ಕಾರ್ ಜೊತೆಗೆ ಸೇರಿದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹತ್ಯೆಗಳು ಆಗುತ್ತಿವೆ. 130ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಕೊಂದು ಹಾಕಲಾಗಿದೆ ಎಂದು ಜೋಶಿ ಇದೇ ವೇಳೆ ಗಂಭೀರ ಆರೋಪ ಮಾಡಿದರು.

ಇನ್ನು ದೆಹಲಿಯಲ್ಲಿ ರಮೇಶ್​ ಜಾರಕಿಹೊಳಿ ಓಡಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಾರಕಿಹೊಳಿ ನನ್ನ ಬಳಿಯೂ ಬಂದಿದ್ದರು. ಕೇವಲ ನೀರಾವರಿ ಯೋಜನೆ ಬಗ್ಗೆ ಮಾತನಾಡಿ ತೆರಳಿದ್ದಾರೆ. ಅಷ್ಟನ್ನೇ ನಾವು ಮಾಡಿದ್ದು ಉಳಿದಿದ್ದು ಗೊತ್ತಿಲ್ಲ ಎಂದರು.

ಎರಡು ವರ್ಷದ ಸಾಧನೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಅಮೃತ ದೇಸಾಯಿ, ಗುಪ್ಕಾರ್ ಜೊತೆಗಿನ ಸಂಬಂಧದ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಏ ರಿಸ್ತಾ ಕ್ಯಾ ಕೆಹಲಾತಾ ಹೈ ಅನ್ನೋದನ್ನು ಹೇಳಬೇಕು. ತಾಯಿಗೆ ಆರಾಮ್​ ಇಲ್ಲ ಅಂತಾ ರಾಹುಲ್ ಗಾಂಧಿ ಗೋವಾದಲ್ಲಿ ಕುಳಿತಿದಾರೆ. ಅಲ್ಲಿಂದ ಬಂದು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ದೇಸಾಯಿ ಆಗ್ರಹಿಸಿದರು.

ಅಸಹಿಷ್ಣುತೆ ಬಗ್ಗೆ ಮಾತನಾಡಿದವರು ಗುಪ್ಕಾರ್​ ಬಗ್ಗೆ ಚಕಾರ ಎತ್ತುತ್ತಿಲ್ಲ. ಅವಾರ್ಡ್ ವಾಪಸಿ ಗ್ಯಾಂಗ್ ಈ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಬೇಕು. ಆತ್ಮಸಾಕ್ಷಿ ಇದ್ದರೆ ಗುಪ್ಕಾರ್ ಗ್ಯಾಂಗ್ ಖಂಡಿಸಿ ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಗುಪ್ಕಾರ್ ಗ್ಯಾಂಗ್ ಜೊತೆಗೆ ಜಮ್ಮು ಕಾಶ್ಮೀರ್ ರಾಜಕೀಯ ಪಕ್ಷಗಳು ಗುರುತಿಸಿಕೊಂಡಿವೆ. 370ನೇ ವಿಧಿಯನ್ನು ಮತ್ತೆ ಸ್ಥಾಪನೆ ಮಾಡುವುದು ಇವರೆಲ್ಲರ ಉದ್ದೇಶವಾಗಿದೆ ಎಂದು ಇದೇ ವೇಳೆ ದೂರಿದರು.

ಬಿಜೆಪಿ ನಾಯಕರ ಆರೋಪ

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರಮಾಧಿಕಾರ ಇದೆ. ಸಿಎಂ ಅವರು ಕೇಂದ್ರದ ವರಿಷ್ಠರನ್ನು ಭೇಟಿಯಾಗಿದ್ದಾರೆ. ವರಿಷ್ಠರು ಯಾವಾಗ ಹೇಳ್ತಾರೋ ಅವಾಗ ವಿಸ್ತರಣೆಯಾಗುತ್ತೆ.‌ ಇದನ್ನು ಬಿಟ್ಟು ಹೆಚ್ಚಿಗೆ ಏನು ಹೇಳೋದಿಲ್ಲ. ವರಿಷ್ಠರನ್ನು ಕೇಳಿ ಸಂಪುಟ ವಿಸ್ತರಣೆ ಮಾಡುವ ಪರಂಪರೆ ನಮ್ಮಲ್ಲಿ ಮೊದಲಿನಿಂದಲೂ ಇದೆ ಎಂದರು.

Last Updated : Nov 21, 2020, 8:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.