ಧಾರವಾಡ: ಸಭಾಪತಿ ಸ್ಥಾನದ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಮುಖಂಡ ರವಿಕುಮಾರ ಫೋನ್ ಮಾಡಿ, ನೀವು ಅಭ್ಯರ್ಥಿಗಳಾಗಿದ್ದೀರಿ ಎಂದು ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದ ತಿಳಿಸ ಬಯಸುವೆ ಎಂದು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕೃತವಾಗಿ ಇವತ್ತು ಅನೌನ್ಸ್ ಮಾಡುತ್ತೇವೆ ಎಂದಿದ್ದಾರೆ. ಪ್ರತಿ ಬಾರಿಯೂ ನಾನು ಹೇಳುತ್ತೇನೆ. ಬೆಳಗಾವಿಯಲ್ಲಿ ಅಧಿವೇಶನ ಆದಾಗ ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಧರಣಿ ಮಾಡುವುದು ಬೇಡ. ಕಳೆದ ಬಾರಿ ನಾನು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲು ಎರಡು ದಿನ ಅದಕ್ಕೇ ಮೀಸಲಿಟ್ಟಿದ್ದೆ ಉತ್ತರ ಕರ್ನಾಟಕದ ಸಮಸ್ಯೆಗೆ ಪ್ರತಿಫಲ ಬೇಕು ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗೆ ಸ್ಪಂದನೆ: ಸಮಗ್ರ ಕರ್ನಾಟಕ ನಮ್ಮದು ಬೇರೆ ಮಾತಿಲ್ಲ ಉತ್ತರ ಕರ್ನಾಟಕದ ಸಮಸ್ಯೆಗೆ ಸ್ಪಂದಿಸಲು ಸರ್ಕಾರ, ಸದಸ್ಯರು ಮುಂದಾಗಬೇಕು. ಮುಂದಿನ ದಿನದಲ್ಲಿ 19 ರಿಂದ 30 ರ ವರೆಗೆ ನಡೆಯುವ ಸದನದಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೀಸಲು ವಿಚಾರ ಕುರಿತು ಮಾತನಾಡಿದ ಅವರು, ನಮ್ಮ ದೇಶ ಜ್ಯಾತ್ಯಾತೀತ ರಾಷ್ಟ್ರ. ಮೀಸಲಾತಿಗೆ ಹೋರಾಟ ಮಾಡುವುದು ಅವರ ಹಕ್ಕು. ಅವರು ಮಾಡುವ ಹೋರಾಟ ಶಾಂತಿಯುತವಾಗಿ ನಡೆಯಲಿ ಎಂಬುದಷ್ಟೇ ನಮ್ಮ ಉದ್ದೇಶ ಎಂದು ತಿಳಿಸಿದರು.
ಇದನ್ನೂಓದಿ:ರೈತರ ವಿರುದ್ಧ ಪ್ರಕರಣಗಳನ್ನು ಹಿಂಪಡೆಯಲಾಗಿದೆ: ಕೇಂದ್ರ ಕೃಷಿ ಸಚಿವರ ಮಾಹಿತಿ