ETV Bharat / state

ಹೌದು ಅದು ನಿಜ...​ ಸಿಎಂಗೆ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಬಿಡುತ್ತಿಲ್ಲ: ಹೊರಟ್ಟಿ ವ್ಯಂಗ್ಯ - ಹುಬ್ಬಳ್ಳಿ ಸುದ್ದಿ

ಯಡಿಯೂರಪ್ಪ ದಿನದ 16 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಅವರಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಈ ಹಿಂದೆ ಹೇಗಿತ್ತೋ ಅದೇ ರೀತಿ ಈಗ ಬಿಜೆಪಿಯಲ್ಲಿ ಆಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.

ಹೊರಟ್ಟಿ
author img

By

Published : Sep 30, 2019, 1:59 PM IST

ಹುಬ್ಬಳ್ಳಿ: ರಾಜ್ಯ ಸರ್ಕಾರ ನಡೆಸುವುದು ತಂತಿ ಮೇಲೆ ನಡೆದಂಗ ಆಗುತ್ತಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿರುವುದು ನೂರಕ್ಕೆ ನೂರು ಸತ್ಯ. ಸಿಎಂಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಬಿಡುತ್ತಿಲ್ಲ, ಮುಂದೆಯೂ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ದಿನದ 16 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಅವರಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಈ ಹಿಂದೆ ಹೇಗಿತ್ತೋ ಅದೇ ರೀತಿ ಈಗ ಬಿಜೆಪಿಯಲ್ಲಿ ಆಗುತ್ತಿದೆ. ಈ ಹಿಂದೆ ಕುಮಾರಸ್ವಾಮಿಯವರೂ ಇದೇ ರೀತಿ ಮಾತುಗಳನ್ನಾಡುತ್ತಿದ್ದರು. ಆವಾಗ ಬಿಜೆಪಿಯವರು ಟೀಕೆ ಮಾಡುತ್ತಿದ್ದರು ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ

ಅನರ್ಹರ ವಿಚಾರಣೆ ಹಾಗೂ ಚುನಾವಣೆ ಮುಂದೂಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ 38 ವರ್ಷದ ರಾಜಕೀಯದಲ್ಲಿ ಈ ರೀತಿ ಚುನಾವಣೆ ಮುಂದೂಡಿರುವುದು ನಾನು ನೋಡಿಲ್ಲ. ಬಿಜೆಪಿಯ ಕೆಲ ನಾಯಕರು ಹೇಳುತ್ತಾರೆ ಅನರ್ಹರಿಗೆ ಟಿಕೆಟ್ ಕೊಡಬೇಕು ಎಂದು ನಮಗೇನು ಬರೆದುಕೊಟ್ಟಿಲ್ಲ. 17 ಜನ ರಾಜೀನಾಮೆ ಕೊಟ್ಟಿರುವುದು ಅದರ ಹಿನ್ನೆಲೆಯನ್ನ ನೋಡಬೇಕು. ಶಾಸಕರನ್ನ ಅನರ್ಹಗೊಳಿಸಿರುವ ರಮೇಶ ಕುಮಾರ ಅವರ ನಿರ್ಧಾರ ಸರಿಯಾಗಿದೆ. ಆದರೆ, ಅನರ್ಹ ಶಾಸಕರನ್ನ ರಕ್ಷಣೆ ಮಾಡುವುದು ಬಿಜೆಪಿಯವರ ಕರ್ತವ್ಯವಾಗಿದೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಧರ್ಮ ಈ ಹಿಂದೆ ತತ್ವಾಧಾರಗಳ ಮೇಲೆ ನಡೆದಿತ್ತು. ಆದರೆ, ಅದನ್ನ ಕೆಲವರು ಹೈಜಾಕ್ ಮಾಡಿದ್ದಾರೆ. ಅದರ ಬಗ್ಗೆ ನಾನೇನೂ ಹೇಳಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ಏನು ತೀರ್ಪು ನೀಡುತ್ತೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

Intro:ಹುಬ್ಬಳ್ಳಿ-02

ರಾಜ್ಯ ಸರ್ಕಾರ ನಡೆಸುವುದು ತಂತಿ ಮೇಲೆ ನಡೆದಂಗ ಆಗುತ್ತಿದೆ ಎಂಬ ಸಿಎಂ‌ ಯಡಿಯೂರಪ್ಪನವರು ಹೇಳಿರುವುದು ನೂರಕ್ಕೆ ನೂರು ಸತ್ಯ. ಯಡಿಯೂರಪ್ಪನವರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಬಿಡುತ್ತಿಲ್ಲ, ಮುಂದೆಯೂ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧುಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ದಿನದ 16 ಗಂಟೆ ಕೆಲಸ ಮಾಡುತ್ತಾರೆ. ಆದ್ರೆ ಅವರಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ.
ಮೈತ್ರಿ ಸರ್ಕಾರದಲ್ಲಿ ಈ ಹಿಂದೆ ಹೇಗಿತ್ತೋ ಅದೇ ರೀತಿ ಈಗ ಬಿಜೆಪಿಯಲ್ಲಿ ಆಗುತ್ತಿದೆ.
ಈ ಹಿಂದೆ ಕುಮಾರಸ್ವಾಮಿಯವರೂ ಇದೇ ರೀತಿ ಮಾತುಗಳನ್ನಾಡುತ್ತಿದ್ದರು.
ಅವಾಗ ಬಿಜೆಪಿಯವರು ಟೀಕೆ ಮಾಡುತ್ತಿದ್ದರು ಎಂದರು.
ಅನರ್ಹರ ವಿಚಾರಣೆ ಹಾಗೂ ಚುನಾವಣೆ ಮುಂದೂಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ 38 ವರ್ಷದ ರಾಜಕೀಯದಲ್ಲಿ ಈ ರೀತಿ ಚುನಾವಣೆ ಮುಂದೂಡಿರುವುದು ನಾನು ನೋಡಿಲ್ಲ. ಬಿಜೆಪಿಯ ಕೆಲ ನಾಯಕರು ಹೇಳುತ್ತಾರೆ ಅನರ್ಹರಿಗೆ
ಟಿಕೆಟ್ ಕೊಡಬೇಕು ಎಂದು ನಮಗೇನು ಬರೆದುಕೊಟ್ಟಿಲ್ಲ.
ಹದಿನೇಳು ಜನ ರಾಜೀನಾಮೆ ಕೊಟ್ಟಿರುವುದು ಅದರ ಹಿನ್ನೆಲೆಯನ್ನ ನೋಡಬೇಕು.
ಶಾಸಕರನ್ನ ಅನರ್ಹಗೊಳಿಸಿರುವ ರಮೇಶ ಕುಮಾರ ಅವರ ನಿರ್ಧಾರ ಸರಿಯಾಗಿದೆ. ಆದ್ರೆ ಅನರ್ಹ ಶಾಸಕರನ್ನ ರಕ್ಷಣೆ ಮಾಡುವುದು ಬಿಜೆಪಿಯವರ ಕರ್ತವ್ಯವಾಗಿದೆ ಎಂದರು.
ವೀರಶೈವ ಲಿಂಗಾಯತ ಧರ್ಮ ಈ ಹಿಂದೆ ತತ್ವಾಧಾರಗಳ ಮೇಲೆ ನಡೆದಿತ್ತು . ಆದ್ರೆ ಅದನ್ನ ಕೆಲವರು ಹೈಜಾಕ್ ಮಾಡಿದ್ದಾರೆ. ಅದರ ಬಗ್ಗೆ ನಾನೇನೂ ಹೇಳಲ್ಲ.
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ನ್ಯಾಯಾಲಯದಲ್ಲಿದೆ.
ನ್ಯಾಯಾಲಯ ಏನೂ ತೀರ್ಪು ನೀಡುತ್ತೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಬೈಟ್- ಬಸವರಾಜ್ ಹೊರಟ್ಟಿ, ವಿಧಾನ‌ ಪರಿಷತ್ ಸದಸ್ಯBody:H B GaddadConclusion:Etv bhrat hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.