ETV Bharat / state

ನನ್ನ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ: ಜಗದೀಶ್​​ ಶೆಟ್ಟರ್​​​​

ಬಿ.ಎಲ್. ಸಂತೋಷ್​​​ ಅವರು ಲಿಂಗಾಯತ ಹಿರಿಯ ನಾಯಕರನ್ನು ಮುಗಿಸುವ ಷಡ್ಯಂತ್ರ ಮುಂದುವರೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಆರೋಪಿಸಿದರು.

ನನ್ನ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ: ಜಗದೀಶ್​​ ಶೆಟ್ಟರ್​​​​ ಕಿಡಿ
author img

By

Published : May 8, 2023, 5:12 PM IST

Updated : May 8, 2023, 5:56 PM IST

ಹುಬ್ಬಳ್ಳಿ: "ನನ್ನ ಸೋಲಿಸಿದರೇ ಖುಷಿ ಪಡುವ ಜನರೇ ಹೆಚ್ಚು. ಆದರೆ ಅವರ ಕನಸನ್ನು ಮತದಾರರು ಕನಸಾಗಿ ಉಳಿಸಲಿದ್ದಾರೆ. ಈ ಬಾರಿ ದಾಖಲೆ ಮತಗಳನ್ನು ಪಡೆದು ಚುನಾವಣೆಯನ್ನು ಗೆದ್ದು ಬರಲಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​​ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದೆ. ಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಹೋಗಿ ಪ್ರಚಾರ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಸ್ಥಳೀಯ ನಾಯಕರು, ರಾಜ್ಯ, ಕೇಂದ್ರದ ನಾಯಕರು ನನಗೆ ಕೈಜೋಡಿಸಿದ್ದಾರೆ. ಜೊತೆಗೆ ನಾನು ಪಕ್ಷ ನೀಡಿದ ಜವಾಬ್ದಾರಿ ತೆಗೆದುಕೊಂಡು, ಪಕ್ಷದ ಅಭ್ಯರ್ಥಿಗಳ ಪರವಾಗಿ ವಿವಿಧೆಡೆ ಪ್ರಚಾರ ಮಾಡಿದ್ದೇನೆ. ಈಗಾಗಲೇ ಎಲ್ಲೆಡೆ ಕಾಂಗ್ರೆಸ್ ಪರವಾಗಿ ದೊಡ್ಡ ಮಟ್ಟದ ಬೆಂಬಲ ಸಿಗುತ್ತಿದೆ. ನನ್ನ ಆರು ಬಾರಿಯ ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ಬಿಜೆಪಿ ನನ್ನ ಸೋಲಿಸಲು ತಂತ್ರ ಹೆಣೆಯಲು ಪ್ರಾರಂಭಿಸಿದೆ. ಕುತಂತ್ರದಿಂದ ಸೋಲಿಸುವ ಗುರಿಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಹು-ಧಾ ಸೆಂಟ್ರಲ್ ಕ್ಷೇತ್ರ ರಾಜ್ಯ, ದೇಶದ ಗಮನ ಸೆಳೆಯುತ್ತಿದೆ. ಯಾವುದೇ ಚುನಾವಣೆ ಬಂದಲ್ಲಿ ಅಭ್ಯರ್ಥಿಗಳು ಉತ್ತಮವಾಗಿದ್ದಾರೆ. ಅವರ ಪರವಾಗಿ ಮತ ಹಾಕುವಂತೆ ನಾಯಕರು ಮನವಿ ಮಾಡುವುದು ಸಾಮಾನ್ಯ. ಆದರೆ ಬಿಜೆಪಿ ನಾಯಕರು ಮಾತ್ರ ವಿರೋಧ ಪಕ್ಷದಲ್ಲಿರುವ ನನ್ನ ಸೋಲಿಸುವಂತೆ ಕರೆ ಕೊಡುತ್ತಿದ್ದಾರೆ. ಇದೀಗ ಪಕ್ಷ ಬಿಟ್ಟಿರುವ ಮಹತ್ವ ಬಿಜೆಪಿಗೆ ಅರಿವಾಗಿದೆ. ನನ್ನ ಗೆಲುವಿನ ನಂತರ ಇತಿಹಾಸ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್​​​ ಅವರು ಲಿಂಗಾಯತ ಹಿರಿಯ ನಾಯಕರನ್ನು ಮುಗಿಸುವ ಷಡ್ಯಂತ್ರ ಮುಂದುವರೆಸಿದ್ದಾರೆ. ಇದೇ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರಿಂದ ವಯಸ್ಸಾಗಿದೆ ಎಂದು ರಾಜೀನಾಮೆ ಕೊಡಿಸಿದ್ದಾರೆ. ಆದರೆ ಅವರನ್ನೇ ಇಂದು ಚುನಾವಣೆ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದ್ರೆ ಲಿಂಗಾಯತರನ್ನು ಮುಗಿಸುವ ಇವರ ಹಿಡನ್ ಅಜೆಂಡಾ ಗೊತ್ತಾಗುತ್ತದೆ.

ಕಾಂಗ್ರೆಸ್​​ ಕದ ತಟ್ಟಿದ್ದ ಸಿಎಂ ಬೊಮ್ಮಾಯಿ: ಬಿ.ಎಲ್. ಸಂತೋಷ್​ ಹೇಳಿಕೆ ಸುದ್ದಿ ಎಲ್ಲೆಡೆ ಹರಿಡಾಡುತ್ತಿದ್ದಂತೆ ಅದನ್ನು ಫೇಕ್ ಎಂದು ಇದೀಗ ಬಿಜೆಪಿಯವರು ದೂರು ಕೊಡಲು ಮುಂದಾಗಿದ್ದಾರೆ. ಇವರಿಗೆ ಅನಾನುಕೂಲ ಯಾವುದು ಆಗುತ್ತದೆ ಅದರ ವಿರುದ್ಧ ದೂರು ಕೊಡೋದು ಇವರ ಸ್ವಭಾವ. ಇಷ್ಟು ದಿನ ಕಳೆದರೂ ಕೂಡಾ ಬಿ.ಎಲ್. ಸಂತೋಷ್​ ಈ ಬಗ್ಗೆ ಸ್ಪಷ್ಟನೆ ನೀಡಲು ಮುಂದಾಗಿಲ್ಲ ಎಂದು ಹರಿಹಾಯ್ದರು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಕೆಜಿಪಿ ಪಕ್ಷ ಕಟ್ಟುವಂತೆ ಮಾಡಿದ್ದೇ ಇವರು, ಆಗ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿ ಸೇರ್ಪಡೆಗೊಳ್ಳುವ ಹಂತದಲ್ಲಿದ್ದರು. ಆದರೆ ಇದೀಗ ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಶೆಟ್ಟರ್​ ಹರಿಹಾಯ್ದರು.

ಬಿಜೆಪಿ ತತ್ವ ಸಿದ್ಧಾಂತಗಳ ಬಗ್ಗೆ ಮಾಡುತ್ತದೆ. ಅದೇ ತನ್ನ ಟಿಕೆಟ್ ಅನ್ನು ರೌಡಿಶೀಟರ್​​ಗಳಿಗೆ, ಸಿಡಿ ಕೇಸ್​​ಗಳಲ್ಲಿದ್ದವರಿಗೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ನನ್ನ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಚುನಾವಣೆಯಲ್ಲಿ ಎರಡು ಬಗೆಯಿದೆ. ಒಂದು ಒಳ ಹೊಡೆತ, ಹೊರ ಒಡೆತ ಸದ್ಯದ ಚುನಾವಣೆ ಒಳಹೊಡೆತದಿಂದ ನಡೆಯುತ್ತಿದ್ದು, ಈ ಬಾರಿ 25 ರಿಂದ 30 ಸಾವಿರ ಅಂತರದಿಂದ ಗೆದ್ದು ಬರಲಿದ್ದೇನೆ ಎಂದು ಜಗದೀಶ್ ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಪಕ್ಷ ಸಮಾಜ ಒಡೆದು ಮತವನ್ನು ಪಡೆದುಕೊಳ್ಳಲು ಹುನ್ನಾರ ನಡೆಸಿದೆ: ಸಿಎಂ ಬೊಮ್ಮಾಯಿ

Last Updated : May 8, 2023, 5:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.