ETV Bharat / state

ಹುಬ್ಬಳ್ಳಿ: ಕಳ್ಳತನವಾದ ಮಗು ಕಿಮ್ಸ್‌ ಹಿಂಭಾಗದಲ್ಲಿ ಪತ್ತೆ, ಪೋಷಕರ ನಿಟ್ಟುಸಿರು - ಬೆಳಗ್ಗೆ ಕಿಮ್ಸ್ ಆವರಣದಲ್ಲಿ ಪ್ರತ್ಯಕ್ಷವಾದ ಮಗು

ತಾಯಿಯ ಕೈಯಿಂದಲೇ ಮಗು ದೋಚಿದ ದುಷ್ಕರ್ಮಿಗಳು ಇಂದು ಬೆಳಗ್ಗೆ ಕಿಮ್ಸ್‌ ಆವರಣದಲ್ಲಿ ಬಿಟ್ಟು ಹೇಗಿದ್ದಾರೆ. ಮಗು ಚೇತರಿಸಿಕೊಳ್ಳುತ್ತಿದೆ. ಪ್ರಕರಣದ ಹಿಂದಿರುವ ಕಾಣದ ಕೈಗಳನ್ನು ಬಂಧಿಸಲು ಪೊಲೀಸರು ಕಾರ್ಯ ನಿರತರಾಗಿದ್ದಾರೆ.

kid found in the mornings at Kim's campus
ಕಿಮ್ಸ್ ಆವರಣದಲ್ಲಿ ಪ್ರತ್ಯಕ್ಷವಾದ ಮಗು
author img

By

Published : Jun 14, 2022, 4:09 PM IST

Updated : Jun 14, 2022, 4:26 PM IST

ಹುಬ್ಬಳ್ಳಿ: ಕಿಮ್ಸ್ ಕಾರಿಡಾರ್​ನಲ್ಲಿ ಹಾಡಹಗಲೇ ತಾಯಿಯ ಕೈಯಲ್ಲಿದ್ದ ಹಸುಗೂಸನ್ನು ಅಪರಿಚಿತ ವ್ಯಕ್ತಿಯೊಬ್ಬ ದೋಚಿ ಪರಾರಿಯಾಗಿದ್ದ ಘಟನೆ ನಿನ್ನೆ ನಡೆದಿತ್ತು. ಈ ಪ್ರಕರಣಕ್ಕೀಗ ತಿರುವು ಸಿಕ್ಕಿದೆ. ‌ಇಂದು ಬೆಳಗ್ಗೆ ಆಸ್ಪತ್ರೆ ಹಿಂಭಾಗದ ಚರಂಡಿಯ ಪಕ್ಕದಲ್ಲಿ ಮಗುವನ್ನು ತಂದು ಬಿಡಲಾಗಿದ್ದು, ತಂದೆ-ತಾಯಿ ನಿಟ್ಟುಸಿರು ಬಿಟ್ಟಿದ್ದಾರೆ. ಕುಂದಗೋಳದ ನೆಹರೂ ನಗರದ ಹುಸೇನ್ ಸಾಬ್ ಶೇಖ್ ಮತ್ತು ಸಲ್ಮಾ ಎಂಬವರ 40 ದಿನದ ಮಗು ಕಳ್ಳತನವಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಡಿಸಿಪಿ ಶಾಹಿಲ್ ಬಾಗ್ಲಾ ನೇತೃತ್ವದಲ್ಲಿ ತನಿಖೆ ಆರಂಭಿಸಿ, ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದರು. ಮಗು ಉಮ್ಮೇಗೆ ಹೆಮೊರಾಜಿಕಲ್ ಡಿಸೀಸ್ ಆಫ್ ನ್ಯೂ ಬಾರ್ನ್ ಎಂಬ ಕಾಯಿಲೆಯಿದ್ದು, ಚಿಕಿತ್ಸೆಗಾಗಿ ಕಳೆದ ಹತ್ತು ದಿನಗಳಿಂದ ಕಿಮ್ಸ್​​ನ ವಾರ್ಡ್ ನಂಬರ್ 103ರಲ್ಲಿ ಆರೈಕೆ ಮಾಡಲಾಗುತ್ತಿತ್ತು. ನಿನ್ನೆ ಮಧ್ಯಾಹ್ನ ಸಲ್ಮಾ ಮಗುವನ್ನು ಆಟವಾಡಿಸುತ್ತಿದ್ದಳು. ಈ‌ ವೇಳೆ ಕಪ್ಪು ಬಣ್ಣದ ಶರ್ಟ್ ತೊಟ್ಟು ಬಂದ ಅಪರಿಚಿತನೊಬ್ಬ ಏಕಾಏಕಿ ಅವರ ಕೈಯಿಂದ ಮಗುವನ್ನು ಕಸಿದುಕೊಂಡು ಪರಾರಿಯಾಗಿದ್ದ.

ಇದನ್ನೂ ಓದಿ: ಹುಬ್ಬಳ್ಳಿ: ಹಾಡಹಗಲೇ ಕೈಯಲ್ಲಿದ್ದ ಮಗು ಹೊತ್ತೊಯ್ದ ಖದೀಮರು

Last Updated : Jun 14, 2022, 4:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.