ಹುಬ್ಬಳ್ಳಿ: ಪೊಲೀಸ್ ಕಮಿಷನರೇಟ್ ಹುಬ್ಬಳ್ಳಿ ಧಾರವಾಡ ಸಹಯೋಗದಲ್ಲಿ, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆ ವತಿಯಿಂದ ನಗರದಲ್ಲಿ ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸಲಾಯಿತು.
ನಗರದ ಮಂಟೂರ ರಸ್ತೆಯಲ್ಲಿನ ಸಾರ್ವಜನಿಕರಿಗೆ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮಾಸ್ಕ್ ಕಡ್ಡಾಯವಾಗಿ ಧರಿಸಿ, ನಿಮ್ಮ ಸುರಕ್ಷತೆ ಕಾಪಾಡಿಕೊಳ್ಳಿ, ಆಗಾಗ ಕೈಗಳನ್ನು ಸ್ಯಾನಿಟೈಸರ್ನಿಂದ ತೊಳೆಯಿರಿ, ಕೆಮ್ಮು ನೆಗಡಿ ಜ್ವರ ಇರುವಂತಹ ವ್ಯಕ್ತಿಗಳಿಂದ ದೂರ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ನಾಮ ಫಲಕದೊಂದಿಗೆ ರ‍್ಯಾಲಿ ಮುಖಾಂತರ ಕೊರೊನಾ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಠಾಣೆ ಇನ್ಸ್ಪೆಕ್ಟರ್ ಅರುಣಕುಮಾರ ಸೋಳಂಕಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.