ETV Bharat / state

ಕನ್ನಡ ಪರ ಸಂಘಟನೆಗಳು ವಸೂಲಿಗೆ ಇಳಿದಿವೆ ಎಂಬ ಹೇಳಿಕೆಗೆ ನಾನು ಬದ್ಧ: ‌ಅರವಿಂದ ಬೆಲ್ಲದ್

ಕನ್ನಡಪರ ಸಂಘಟನೆಗಳ ವಿರುದ್ಧ ಶಾಸಕ ‌ಅರವಿಂದ ಬೆಲ್ಲದ್ ಟೀಕೆ ಮುಂದುವರೆದಿದೆ. ಕನ್ನಡ ಪರ ಸಂಘಟನೆ ಕಾರ್ಯಕರ್ತರು ವಸೂಲಿಗೆ ಇಳಿದಿದ್ದಾರೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಶಾಸಕ ‌ಅರವಿಂದ ಬೆಲ್ಲದ್ ಹೇಳಿದ್ದಾರೆ.

dsd
ಅರವಿಂದ ಬೆಲ್ಲದ್ ಹೇಳಿಕೆ
author img

By

Published : Nov 26, 2020, 2:44 PM IST

ಹುಬ್ಬಳ್ಳಿ: ಕನ್ನಡ ಪರ ಸಂಘಟನೆ ಕಾರ್ಯಕರ್ತರು ವಸೂಲಿಗೆ ಇಳಿದಿದ್ದಾರೆ ಎಂಬ ಹೇಳಿಕೆಗೆ ನಾನು ಈಗಲೂ ‌ಬದ್ಧವಾಗಿದ್ದೇನೆ ಎಂದು ಶಾಸಕ ‌ಅರವಿಂದ ಬೆಲ್ಲದ್ ಹೇಳಿದ್ದಾರೆ.

ಅರವಿಂದ ಬೆಲ್ಲದ್ ಹೇಳಿಕೆ

ವಸೂಲಿ ಮಾಡುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ನಾನು ಸಾಬೀತು ಮಾಡುವ ಅವಶ್ಯಕತೆ ಇಲ್ಲ. ಶಾಸಕರಾದವರಿಗೆ ಸಚಿವರಾಗಬೇಕು ಎಂಬ ಆಸೆ ಇರುತ್ತೆ. ಹೀಗಾಗಿ ಎಲ್ಲರೂ ಪೈಪೋಟಿ ಮಾಡುತ್ತಾರೆ. ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಮೂಲ ಬಿಜೆಪಿ ಮತ್ತು ವಲಸಿಗರ ನಡುವೆ ಭಿನ್ನಾಭಿಪ್ರಾಯವಿಲ್ಲ.

ಸಚಿವ ಸ್ಥಾನಕ್ಕಾಗಿ ಬೇರೆ ಬೇರೆ ರೀತಿಯ ಸ್ವರ ಬರುವುದು ಸಹಜ. ಸಚಿವ ಸ್ಥಾನಕ್ಕಾಗಿ ನಮ್ಮ ಪಕ್ಷದಲ್ಲಿ ಲಾಭಿ ಮಾಡಬೇಕು ಎನ್ನುವ ಪರಿಸ್ಥಿತಿ ಇಲ್ಲ. ಪಕ್ಷದ ಹಿರಿಯರು ರಾಜ್ಯದ ಹಿತ ಕಾಪಾಡುವಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.