ETV Bharat / state

'ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಕಷ್ಟದ ಕೆಲಸ' - ಸಭಾಪತಿ ಕಾಯಿದೆ ಕಾನೂನು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರದಲ್ಲಿ ತೊಡಗಿರುವ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಕಷ್ಟದ ಕೆಲಸ ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

Basavaraja Oratti talk
ಹೊರಟ್ಟಿ ಅಭಿಪ್ರಾಯ
author img

By

Published : Dec 13, 2020, 5:05 PM IST

ಧಾರವಾಡ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಕಷ್ಟದ ಕೆಲಸ. ಆದರೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಅವರಿಗೆ ಕೊಡಬಹುದು ಎಂದು ಧಾರವಾಡದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ಸರ್ಕಾರಿ ನೌಕರರಾಗಿ ಮಾಡಿದರೆ, ಆ ಬಳಿಕ ಎಲ್ಲರೂ ಬೇಡಿಕೆ ಇಡುತ್ತಾರೆ ಎಂದರು.

ಓದಿ: ಕೋಡಿಹಳ್ಳಿ ಬಣದ ಮುಖಂಡರೊಂದಿಗೆ ಡಿಸಿಎಂ ಸವದಿ ಕಚೇರಿಯಲ್ಲಿ ಸಭೆ

'ಸಭಾಪತಿ ತಮ್ಮ ಸ್ಥಾನದ ಗೌರವ ಕಾಪಾಡಬೇಕಿತ್ತು'

ಬಿಎ‌ಸಿ(ಕಲಾಪ ಸಲಹಾ ಸಮಿತಿ) ಸಭೆ ಬಗ್ಗೆ ಹೇಳದೇ ಸಭಾಪತಿ ಸದನ ಮೊಟಕುಗೊಳಿಸಿದ್ದಾರೆ. ಕರ್ನಾಟಕ ವಿಧಾನ ಪರಿಷತ್ ಇತಿಹಾಸದಲ್ಲಿ ‌ಮೊದಲ ಬಾರಿಗೆ ಇಂತಹ ಬಿಕ್ಕಟ್ಟು ಬಂದಿದೆ. ಸಭಾಪತಿ ಕಾಯಿದೆ, ಕಾನೂನು ನೋಡದೆ ಸದನ ಮೊಟಕುಗೊಳಿಸಿದ್ದಾರೆ. ಅವರು ಆ ಸ್ಥಾನದ ಗೌರವ ಕಾಪಾಡಬೇಕಿತ್ತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.