ETV Bharat / state

ಈ ಸಾರಿ ಬೆಳಗಾವಿಯಲ್ಲಿಯೇ ಚಳಿಗಾಲದ ಅಧಿವೇಶನ : ಸಭಾಪತಿ ಹೊರಟ್ಟಿ ವಿಶ್ವಾಸ - ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಬೆಳಗಾವಿಯಲ್ಲಿ ಅಧಿವೇಶನ ಮಾಡಿಯೇ ತಿರುತ್ತೇವೆ. ಇಲ್ಲಿ ಅಧಿವೇಶನ ಆಗುವುದು ಖಚಿತ. ಈಗಾಗಲೇ ಕೆಲವು ಕಚೇರಿ ಜಿಲ್ಲೆಗೆ ಸ್ಥಳಾಂತರ ಸಹ ಮಾಡಿದ್ದಾರೆ..

basavaraja-horatti-talk-about-winter-session
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
author img

By

Published : Sep 8, 2021, 7:24 PM IST

ಧಾರವಾಡ : ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆಗುತ್ತದೆ. ಹಿಂದಿನ ಸಿಎಂ ಯಡಿಯೂರಪ್ಪನವರು ಇದ್ದಾಗಲೂ ನಾನು ಬೆಳಗಾವಿ ಅಧಿವೇಶನದ ಬಗ್ಗೆ ಪತ್ರ ಬರೆದಿದ್ದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಈ ಕುರಿತು ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಮ್ಮಲ್ಲಿ ಒಟ್ಟು 900 ಅಧಿಕಾರಿಗಳು, 300 ಶಾಸಕರು ಸೇರಿ ಬಹಳ ಜನ ಆಗುತ್ತಾರೆ. ಈಗ ಮಳೆಗಾಲ ಹಾಗೂ ಕೋವಿಡ್ ಇದೆ.

ಹೀಗಾಗಿ, ಈಗಿನ ಅಧಿವೇಶನ ಬೆಂಗಳೂರಿನಲ್ಲೇ ಆಗುತ್ತದೆ. ಆದರೆ, ಸಿಎಂ ನಮ್ಮ ಕಡೆಯವರು. ಹೀಗಾಗಿ, ನವೆಂಬರ್-ಡಿಸೆಂಬರ್‌ನಲ್ಲಿ ಸಂಪೂರ್ಣ ಬೆಳಗಾವಿಯಲ್ಲಿ ಅಧಿವೇಶನ ಆಗುತ್ತದೆ ಎಂಬ ಭರವಸೆ ನೀಡಿದರು.

ಬೆಳಗಾವಿಯಲ್ಲಿ ಅಧಿವೇಶನ ಮಾಡಿಯೇ ತಿರುತ್ತೇವೆ. ಇಲ್ಲಿ ಅಧಿವೇಶನ ಆಗುವುದು ಖಚಿತ. ಈಗಾಗಲೇ ಕೆಲವು ಕಚೇರಿ ಜಿಲ್ಲೆಗೆ ಸ್ಥಳಾಂತರ ಸಹ ಮಾಡಿದ್ದಾರೆ. 9 ಕಚೇರಿ ಸ್ಥಳಾಂತರ ಮಾಡಲು ನಾನು ಕೇಳಿದ್ದೆ. ಈಗ ಅದರಲ್ಲಿ ಮೂರು ಕಚೇರಿ ಸ್ಥಳಾಂತರ ಆಗಿವೆ ಎಂದು ಹೇಳಿದರು.

ಓದಿ: ಜಾತಿ ಸಮೀಕ್ಷೆ ವರದಿ ಸೋರಿಕೆ ಆಗಿಲ್ಲ.. ಸಮೀಕ್ಷೆ ಯಾವುದೇ ಜಾತಿ, ವರ್ಗದ ವಿರುದ್ಧ ನಡೆಸಿದ್ದಲ್ಲ : ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.