ETV Bharat / state

ಪರಿಷತ್‌ನಲ್ಲಿ ಬಸವರಾಜ ಹೊರಟ್ಟಿ ಎಂಬ ಶಿಖರಸೂರ್ಯ.. ಶಿಕ್ಷಕರ ಬಂಧು, ಸಾಮಾನ್ಯರ ಕಷ್ಟಗಳ ಪರಿಹಾರಕ್ಕೆ ಸದಾ ಮುಂದು.. - ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ್ತೆ ಬಸವರಾಜ ಹೊರಟ್ಟಿ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ದಾಖಲೆಯ ಜಯ ಸಾಧಿಸಿದ್ದಾರೆ

ಹೊರಟ್ಟಿಯಗರಿಗೆ ವ್ಯಕ್ತಿ ಕೇಂದ್ರಿಕೃತವಾಗಿ ಟೀಕೆ-ಆರೋಪಗಳು ಕೇಳಿ ಬಂದವು. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು, ಪಕ್ಷಗಳ ನಾಯಕರು ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರನ್ನೇ ಕೇಂದ್ರವಾಗಿಸಿಕೊಂಡು ಆರೋಪಗಳ ಸುರಿಮಳೆ ಮಾಡಿದರು. ಇದಕ್ಕೆ ಪ್ರತಿಯಾಗಿ ಹೊರಟ್ಟಿ ಹಾಗೂ ಬಿಜೆಪಿ ನಾಯಕರು ಉತ್ತರ ನೀಡಲು ಈ ಚುನಾವಣೆ ವೇದಿಕೆಯಾಗಿತ್ತು..

ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಪಡೆದ ಶಿಕ್ಷಕರ ಕಟ್ಟಾಳು ಬಸವರಾಜ ಹೊರಟ್ಟಿ !

author img

By

Published : Jun 15, 2022, 3:33 PM IST

ಹುಬ್ಬಳ್ಳಿ : ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ್ತೆ ಬಸವರಾಜ ಹೊರಟ್ಟಿ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ದಾಖಲೆಯ ಜಯ ಸಾಧಿಸಿದ್ದಾರೆ. ಪ್ರಮುಖ ಮೂರು ಪಕ್ಷಗಳು, ಪಕ್ಷೇತರರು ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ-ಕಾಂಗ್ರೆಸ್‌ ನಡುವಿನ ಸಮರ ಪ್ರಮುಖವಾಗಿದ್ದರೂ, ಇದರಲ್ಲಿ ಗೆಲುವು ಯಾರದ್ದು ಎಂಬ ನಿರೀಕ್ಷೆ ಹೆಚ್ಚಿತ್ತು.‌ ಹೊರಟ್ಟಿ‌ ಅವರು ಕಳೆದ ಎಲ್ಲಾ ಚುನಾವಣೆಯಲ್ಲೂ ಜೆಡಿಎಸ್ ಪಕ್ಷದಿಂದ ಗೆದ್ದು ಬಂದಿದ್ದರು‌. ಆದ್ರೆ, ಈ ಬಾರಿ ಅವರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಹಲವರ ವಿರೋಧದ ನಡುವೇ ಅಭ್ಯರ್ಥಿಯಾಗಿದ್ದರು.

ಹೊರಟ್ಟಿಯವರಿಗೆ ವ್ಯಕ್ತಿ ಕೇಂದ್ರಿಕೃತವಾಗಿ ಟೀಕೆ-ಆರೋಪಗಳು ಕೇಳಿ ಬಂದವು. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು, ಪಕ್ಷಗಳ ನಾಯಕರು ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರನ್ನೇ ಕೇಂದ್ರವಾಗಿಸಿಕೊಂಡು ಆರೋಪಗಳ ಸುರಿಮಳೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಹೊರಟ್ಟಿ ಹಾಗೂ ಬಿಜೆಪಿ ನಾಯಕರು ಉತ್ತರ ನೀಡಲು ಈ ಚುನಾವಣೆ ವೇದಿಕೆಯಾಗಿತ್ತು. ಆದರೆ, ಇಲ್ಲಿ ಪಕ್ಷದ ವರ್ಚಸ್ಸಿಗಿಂತ ಹೊರಟ್ಟಿ ಅವರು ದಾಖಲೆಯ ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣವಾಗಿದೆ.

ಇನ್ನು ಜಾತ್ಯಾತೀತ ಜನತಾದಳಲ್ಲಿದ್ದಾಗ ಸಹ ಬಸವರಾಜ ಹೊರಟ್ಟಿ ಅವರು ಪಕ್ಷದ ವೇದಿಕೆ ಬಳಸಿಕೊಳ್ಳದೇ ಜಯ ಸಾಧಿಸುತಿದ್ದರು.‌ ಈಗ ಸತತ 8ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ 4 ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 11,000ನಲ್ಲಿ 7070 ಮತಗಳನ್ನು ಗಳಿಸಿದ್ದಾರೆ ಬಸವರಾಜ ಹೊರಟ್ಟಿ.

ದಾಖಲೆ ಸರದಾರನ ಗೆಲುವಿನ ಹಿಂದಿದೆ ಅಚ್ಚರಿಯ ಮಾಹಿತಿ : ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾದ ಬಳಿಕ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಪಶ್ಚಿಮ ಶಿಕ್ಷಕರ ಪಧವೀಧರರ ಕ್ಷೇತ್ರದ ರಣಕಣದ ಫಲಿತಾಂಶದಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ 9266 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ 4597 ಮತ ಪಡೆದರೆ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ 273, ಪಕ್ಷೇತರರಾದ ಎಂ.ಪಿ. ಕರಬಸಪ್ಪ 60, ಕೃಷ್ಣವಾಣಿ 58, ಪ್ರೊ. ಎಫ್.ವಿ. ಕಲ್ಲನಗೌಡರ 27, ವೆಂಕನಗೌಡ ಗೋವಿಂದಗೌಡರ 79 ಮತ ಪಡೆದಿದ್ದಾರೆ.

ಈ ಬಾರಿಯ ಚುನಾವಣೆ ಗೆಲ್ಲುವ ಮೂಲಕ ಬಸವರಾಜ ಹೊರಟ್ಟಿ ಮತ್ತೊಂದು ದಾಖಲೆ ಮಾಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ 8‌ ಬಾರಿಗೆ ಈ ವರೆಗೂ ಯಾರೊಬ್ಬರೂ ಗೆಲುವು ಕಂಡಿಲ್ಲ. ಈ‌ ಮೂಲಕ ಬಸವರಾಜ ಹೊರಟ್ಟಿ ಪರಿಷತ್ ಪ್ರವೇಶಿಸಿ ವಿಶ್ವದಾಖಲೆ ಬರೆದು, ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದಾರೆ. ಇದರ ಜತೆಗೆ ಅಂಬಾಸೆಡರ್ ಕಾರ್ ಬಸವರಾಜ ಹೊರಟ್ಟಿಯವರಿಗೆ ಅದೃಷ್ಟದ ಕಾರ್ ಎಂಬುದು‌ ಮತ್ತೊಮ್ಮೆ ಸಾಬೀತಾಗಿದೆ.

ಯಾವಾಗ ಎಷ್ಟೆಷ್ಟು ಮತ ಪಡೆದಿದ್ದರು? : ಮೊದಲ ಚುನಾವಣೆಯಿಂದ ಅಂದ್ರೆ 1980ರಲ್ಲಿ 1903, 1986ರಲ್ಲಿ 3426, 1992 ರಲ್ಲಿ 4716, 1998ರಲ್ಲಿ 6253, 2004ರಲ್ಲಿ 7369, 2010ರಲ್ಲಿ 5889, 2016ರಲ್ಲಿ 7480 ಹಾಗೂ ಈ ಚುನಾವಣೆಯಲ್ಲಿ 9266 ಮತ ಪಡೆಯುವ ಮೂಲಕ ಚುನಾವಣೆಯಿಂದ ಚುನಾವಣೆಗೆ ಹೊರಟ್ಟಿ ವರ್ಚಸ್ಸು ಹೆಚ್ಚಾಗಿರೋದು ಗಮನಾರ್ಹ ಸಂಗತಿಯಾಗಿದೆ.

ಆಡಳಿತ ಪಕ್ಷ ಬಿಜೆಪಿಯ ಅಭ್ಯರ್ಥಿಯಾದ ಮೇಲೆ ಮತಗಳಲ್ಲಿ ಏರಿಕೆಯಾಗುವ ನೀರಿಕ್ಷೆ ಇತ್ತು. ಆದ್ರೆ, ಈ ಹಿಂದಿನ ಚುನಾವಣೆಯಲ್ಲಿ ಹೊರಟ್ಟಿ ಅವರು ಪಡೆದಿದ್ದ ಮತಗಳಲ್ಲಿ ಅಷ್ಟೇನೂ ಗಮನಾರ್ಹ ಏರಿಕೆ ಕಂಡಿಲ್ಲ. ಬಿಜೆಪಿಗಿಂತಲೂ ಅವರ ವೈಯಕ್ತಿಕ ವರ್ಚಸ್ಸು ಮತ್ತೆ ಮೇಲಾಗಿದೆ.‌ ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಗುರು ಶಿಷ್ಯರ ಜಿದ್ದಾಜಿದ್ದಿನಲ್ಲಿ ಶಿಷ್ಯ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಮೂರಂಕಿ ದಾಟಲೇ ಇಲ್ಲ. ತನ್ಮೂಲಕ ಗುರುವಿನ ಎದುರು ಜೆಡಿಎಸ್ ಅಭ್ಯರ್ಥಿ ಶರಣಾಗಿದ್ದಾನೆ. ನಾಯಕತ್ವದ ಕೊರತೆ ಹಿನ್ನೆಲೆಯಲ್ಲಿ ಕೈ ಅಭ್ಯರ್ಥಿ ಪರಾಭವಗೊಂಡ್ರೆ, ಹೊರಟ್ಟಿ ಬಿಜೆಪಿ ಸೇರ್ಪಡೆ ಸ್ಟ್ರಾಟರ್ಜಿ ವರ್ಕೌಟ್ ಆದಂತಾಗಿದೆ.

ಇದನ್ನೂ ಓದಿ: 2 ತಿಂಗಳು ಆರೋಪಿಗಳನ್ನು ಬಂಧಿಸುವಂತಿಲ್ಲ: ವರದಕ್ಷಿಣೆ ಕಿರುಕುಳ ಕೇಸ್​ ಕುರಿತು ಮಹತ್ವದ ಆದೇಶ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.