ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಮುಖ್ಯ ರಸ್ತೆಯಲ್ಲಿರುವ ತೇಜ್ ಬಾರ್ನಲ್ಲಿ ಕಳ್ಳತನ ನಡೆದಿದೆ.
ಮಧ್ಯರಾತ್ರಿ ಬಾರ್ನ ಕಬ್ಬಿಣದ ಗ್ರಿಲ್ ಮುರಿದು ಲಕ್ಷಾಂತರ ನಗದು ಕಳ್ಳತನ ಮಾಡಲಾಗಿದ್ದು, ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವು ತಿಂಗಳ ಹಿಂದೆ ಇದೇ ಬಾರ್ನಲ್ಲಿ ಕಳ್ಳತನವಾಗಿತ್ತು. ಸ್ಥಳಕ್ಕಾಗಮಿಸಿದ ಹಳೇ ಹುಬ್ಬಳ್ಳಿಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.