ಧಾರವಾಡ: ಸರ್ಕಾರ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ಇಷ್ಟೊಂದು ತರಾತುರಿ ಮಾಡಿದ್ದು ಏಕೆ ಎಂಬುದು ಗೊತ್ತಾಗುತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನುವಾರ ಹತ್ಯೆ ನಿಷೇಧ ವಿಧೇಯಕ ರೈತರಿಗೆ ಸಂಬಂಧಿಸಿದ ವಿಷಯ. ಈ ಬಗ್ಗೆ ಚರ್ಚೆಯಾದ ಮೇಲೆ ಬಿಲ್ ಪಾಸ್ ಮಾಡಬೇಕಿತ್ತು ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಓದಿ: ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಿಸಿದ ಸಿದ್ದಗಂಗಾ ಮಠದ ಸ್ವಾಮೀಜಿ
ಅನುಭವ ಇಲ್ಲದವರು ಇದನ್ನು ಮಾಡಿದ್ದು, ನಮಗೆ ಗೊತ್ತಾಗಲಿಲ್ಲ. ಲಕ್ಷಾಂತರ ರೂಪಾಯಿ ದಂಡ, 7 ವರ್ಷ ಜೈಲು ಯಾಕೆ? ನಾನು ಕೂಡಾ ಎಮ್ಮೆ, ಆಕಳು ಸಾಕಿದ್ದೇನೆ. ಇಲ್ಲೊಂದು ಕಾನೂನು ಪಾಸ್ ಮಾಡಿ ಇಡೀ ರಾಜ್ಯದ ಎಲ್ಲ ಶಾಸಕರು ಆಕಳು ಸಾಕಲಿ. ಅದಕ್ಕೆ ಶಾಸಕರ ಆಕಳು ಎಂದು ಗುರುತು ಹಾಕಿ ಸಾಕುವುದಾದರೆ ನಮ್ಮ ಆಕಳನ್ನು ಉಚಿತವಾಗಿ ಕೊಡುತ್ತೇವೆ ಎಂದರು.
ಇದು ಬಹಳ ಕಷ್ಟದ ಕಾನೂನು. ಗೋರಕ್ಷಣೆಗೆ ಶ್ರಮಿಸುವವರಿಗೆ ಏನೂ ಮಾಡಿದರೂ ಕ್ರಮ ಇಲ್ಲ. ಇದರಲ್ಲಿ ಭ್ರಷ್ಟಾಚಾರ ನಡೆಯಲಿದೆ. ನಿರುದ್ಯೋಗಿಗಳು ಈಗ ಇದೇ ಕೆಲಸಕ್ಕೆ ನಿಲ್ಲಲಿದ್ದಾರೆ. ನಾವು ಹಳ್ಳಿ ಹಳ್ಳಿಯಲ್ಲಿ ಈ ಬಗ್ಗೆ ಪ್ರಚಾರ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.