ಅಳ್ನಾವರ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ತಡೆಯಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ವಾರ್ಡ್ ಸಮಿತಿ ಸದಸ್ಯರು ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸಿದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಮುನ್ನೆಚ್ಚರಿಕೆಯಿಂದ ಇರಬೇಕೆಂದು ಅರಿವು ಮೂಡಿಸಿದರು. ಈ ಕುರಿತು ಮುದ್ರಿಸಲಾದ ಕರಪತ್ರಗಳನ್ನು ಹಂಚಲಾಯಿತು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಛಗನಲಾಲ್ ಪಟೇಲ್, ನಾಗರಾಜ ಗುರ್ಲಹುಸೂರು, ಸತ್ತಾರ ಬಾತಖಂಡಿ, ಸುರೇಂದ್ರ ಕಡಕೋಳ, ಎಸ್.ಆರ್. ಹಿರೇಹಾಳ, ದೀಪಕ ಕಿತ್ತೂರು, ಬೈರು ಬಾಂದುರಗಿ, ಉಮಾ ತಡಕೋಡ, ರಾಜೇಶ್ವರಿ ಕೂಳೂರ, ಕಸ್ತೂರಿ ಕಡಕೋಳ ಇದ್ದರು.