ETV Bharat / state

Shakthi Yojana: ಶಕ್ತಿ ಯೋಜನೆ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ: ಮನವಿ ಸ್ವೀಕರಿಸಿದ ಸಚಿವ ಸಂತೋಷ ಲಾಡ್

Auto drivers protest against Shakthi Yojana: ಮಹಿಳೆಯರಿಗೆ ಉಚಿತ ಬಸ್ ಪಾಸ್ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

Auto Drivers Protest
ಆಟೋ ಚಾಲಕರ ಮನವಿ ಸ್ವೀಕರಿಸಿದ ಸಚಿವ ಲಾಡ್
author img

By

Published : Jul 31, 2023, 1:03 PM IST

ಶಕ್ತಿ ಯೋಜನೆ ವಿರೋಧಿಸಿ ಆಟೋ ಚಾಲಕರಿಂದ ಪ್ರತಿಭಟನೆ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ವಾಣಿಜ್ಯ ನಗರದಲ್ಲಿ ಆಟೋ ಚಾಲಕರ ಸಂಘ ಬಂದ್​ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಇಂದು ನೂರಾರು ಆಟೋ ಚಾಲಕರು, ಮಾಲೀಕರು ಪ್ರತಿಭಟಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. "ಶಕ್ತಿ ಯೋಜನೆಯನ್ನು ರದ್ದು ಮಾಡಿ, ನಮ್ಮನ್ನು ರಕ್ಷಿಸಿ" ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದರು. ಸಚಿವರು ಆಗಮಿಸುತ್ತಲೇ ಬಾಯಿ ಬಾಯಿ ಬಡಿದುಕೊಂಡ ಪ್ರತಿಭಟನಾಕಾರರು ಅಳಲು ತೊಡಗಿಕೊಂಡರು. ಆಟೋ ಚಾಲಕರ ಸಂಕಷ್ಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಲಿಸಿದರು. ಬಳಿಕ ಚಾಲಕರು ಅವರಿಗೆ ಮನವಿ ಪತ್ರ ನೀಡಿದರು.

ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್, "ಆಟೋ ಚಾಲಕರ ಬೇಡಿಕೆಗಳ ಬಗ್ಗೆ ನೇರವಾಗಿ ಸಿಎಂ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ಸಾರಿಗೆ ಸಚಿವರ ಸಭೆಯಲ್ಲಿ ಯಾವ ತೀರ್ಮಾನವಾಗುತ್ತದೆ ಎಂದು ಕಾದು ನೋಡಬೇಕು. ಸರ್ಕಾರದ ಪ್ರತಿನಿಧಿಯಾಗಿ ನಾನು ಮನವಿ‌ ಸ್ವೀಕರಿಸಿದ್ದೇನೆ. ಮುಂದಿ‌ನ ತೀರ್ಮಾನ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತೆಗೆದುಕೊಳ್ಳುತ್ತಾರೆ. ಆಟೋ ಚಾಲಕರ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ‌ ತರಲಾಗುವುದು" ಎಂದರು.

"ಖರ್ಗೆಯವರು ದೆಹಲಿಯಲ್ಲಿ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತೇನೆ. ಪಕ್ಷ ಸಂಘಟನೆ, ಪಾಲಿಸಿ ಮೇಕಿಂಗ್, ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ. ಸಿದ್ದರಾಮಯ್ಯ ಅವರು ಸಭೆಯಲ್ಲಿ ಯಾವುದೇ ಪತ್ರ ಹರಿದಿಲ್ಲ. ನಾನು ಸಭೆಯಲ್ಲಿ ಇದ್ದೆ. ಪತ್ರ ಹರಿದಿದ್ದನ್ನು ನಾನು ನೋಡಿಲ್ಲ. ಹಾಗೇನು ಆಗಿಲ್ಲ. ಈ ಕುರಿತು ನನಗೆ ಹೆಚ್ಚಿನ ನನಗೆ ಮಾಹಿತಿ ಇಲ್ಲ" ಎಂದು ಸಂತೋಷ ಲಾಡ್​ ಇದೇ ವೇಳೆ ಸ್ಪಷ್ಟಪಡಿಸಿದರು.

ಆಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ನೀಡುವ ಕುರಿತು ಪ್ರತಿಕ್ರಿಯಿಸುತ್ತಾ, "ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಬಡವರ, ಹಿಂದುಳಿದ ವರ್ಗಗಳ ಪರವಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗುವುದು" ಎಂದು ಭರವಸೆ ನೀಡಿದರು. ಇದೇ ವೇಳೆ, "ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕರಿಸಲಾಗುತ್ತಿದೆ. ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಣ ನೀಡಲಾಗುವುದು" ಎಂದರು.

ಇದನ್ನೂ ಓದಿ: ಹುಬ್ಬಳ್ಳಿ: ಮಹಿಳೆಯರಿಗೆ ಉಚಿತ ಬಸ್ ಪಾಸ್ ಖಂಡಿಸಿ ಆಟೋ ಚಾಲಕರಿಂದ ಪ್ರತಿಭಟನೆ

ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. "ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೇ ಸಮಾಜದ ಎಲ್ಲ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು" ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.