ETV Bharat / state

ಹುಬ್ಬಳ್ಳಿ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ.. ಆರೋಪಿ ನಾಪತ್ತೆ

ಹುಬ್ಬಳ್ಳಿ ರೌಡಿಶೀಟರ್ ಮೇಲೆ ಮಾರಣಾಂತಿಕ‌ ಹಲ್ಲೆ ನಡೆದಿದ್ದು, ಕಮರಿಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

attack on rowdy sheeter in Hubli
ಹುಬ್ಬಳ್ಳಿ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ
author img

By

Published : Oct 16, 2022, 12:15 PM IST

ಹುಬ್ಬಳ್ಳಿ (ಧಾರವಾಡ): ಹಳೇ ವೈಷಮ್ಯ ಹಿನ್ನೆಲೆ ರೌಡಿಶೀಟರ್ ಮೇಲೆ ಮಾರಣಾಂತಿಕ‌ ಹಲ್ಲೆ ನಡೆಸಿರುವ ಘಟನೆ ಕಮರಿಪೇಟೆಯಲ್ಲಿ ಕಳೆದ ರಾತ್ರಿ ನಡೆದಿದೆ.‌ ರಾಜು ಕಠಾರೆ ಅಲಿಯಾಸ್ ಬೆಂಗಳೂರು ರಾಜಾ ಹಲ್ಲೆಗೆ ಒಳಗಾದ ರೌಡಿಶೀಟರ್.

ಶನಿವಾರ ರಾತ್ರಿ ತಮ್ಮ ಮನೆಯ ಮುಂದೆ ನಿಂತಿರುವಾಗಲೇ ಮಾರಕಾಸ್ತ್ರಗಳಿಂದ ಆಗಮಿಸಿದ ಕಾಂತಾ ಕಠಾರೆ ಎನ್ನುವಾತ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇದರಿಂದ ರಾಜು ಕಠಾರೆ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಜು ಕಠಾರೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಘಟನೆಗೆ ಹಳೇ ವೈಷಮ್ಯ ಕಾರಣ ಎನ್ನಲಾಗ್ತಿದೆ. ಹಲವು ವರ್ಷಗಳಿಂದ ದ್ವೇಷ ಸಾಧಿಸುತ್ತಿದ್ದರು. ಆದ್ರೆ ನಿನ್ನೆ ರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿ ಕಾಂತಾ ಕಠಾರೆ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಕಮರಿಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಇಬ್ಬರು ಮನೆಗಳ್ಳರ ಬಂಧನ: 25ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.