ಹುಬ್ಬಳ್ಳಿ: ಕಾರಿನಲ್ಲಿ ಮಾಸ್ಕ್ ಧರಿಸದೇ ತಿರುಗಾಡುತಿದ್ದ ಯುವಕನನ್ನು ಪ್ರಶ್ನಿಸಿದ ಪೊಲೀಸ್ ಮೇಲೆಯೇ ಕಾರು ಚಾಲಕ ಹಲ್ಲೆ ನಡೆಸಿದ ಘಟನೆ ಹೊಸೂರು ವೃತ್ತದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗೋರಖಪುರ ಮೂಲದ ವೀರೇಂದ್ರ ಪ್ರಕಾಶ ಸಿಂಗ್ ಎಂಬುವವನೇ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಆರೋಪಿ. ಯುವಕ ಮಾಸ್ಕ್ ಇಲ್ಲದೇ ಕಾರಿನಲ್ಲಿ ಲಿಂಗರಾಜನಗರ ಕಡೆಗೆ ಹೊರಟಾಗ ಪೊಲೀಸ್ ಕಾನ್ಸ್ಟೇಬಲ್ ಶ್ರೀಶೈಲ್ ಸಂಗಪ್ಪ ನರಗುಂದ ಎಂಬುವವರು ಹಿಡಿದು ಎಲ್ಲಿಗೆ ಹೋರಟ್ಟಿದ್ದೀರಿ. ನಿಮ್ಮ ಹತ್ತಿರ ಪರವಾನಗಿ ಇದೆಯೇ ಎಂದು ಕೇಳಿದ್ದಾರೆ.
ಇಷ್ಟಕ್ಕೆ ಕಾರು ಚಾಲಕ ನನ್ನ ಕಾರು ಏಕೆ ತಡೆಯುತ್ತೀರಿ. ನಿಮಗೆ ಏನು ಅಧಿಕಾರ ಇದೆ ಎಂದು ಪೊಲೀಸ್ ಕಾನ್ಸಟೇಬಲ್ ಮುಖ ಹಾಗೂ ಭುಜಕ್ಕೆ ಹೊಡೆದಿದ್ದಾನೆ. ಅಲ್ಲೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಕಾರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ : ಕೆಎಟಿ ಆದೇಶದ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ