ಹುಬ್ಬಳ್ಳಿ: ಇಲ್ಲಿನ ಹೊರವಲಯದಲ್ಲಿ ಕಟ್ಟಡ ಕಾಮಗಾರಿಗೆಂದು ತಂದು ಹಾಕಿದ್ದ ಕಬ್ಬಿಣದ ರಾಡ್ಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರುತಿ ಬಸಪ್ಪ, ಅರಣ ಶಿಕಾರಿ, ಮತ್ತು ಪೀರ್ಸಾಬ್ ಮಾಬುಸಾಬ್ ಕೊಲ್ಕರ್ ಬಂಧಿತ ಆರೋಪಿಗಳು. ಸುಮಾರು 85,000 ಬೆಲೆಬಾಳುವ ಕಬ್ಬಿಣದ ರಾಡುಗಳು ಮತ್ತು ಐದು ಲಕ್ಷ ಬೆಲೆಬಾಳುವ ವಾಹನವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ಪಿಎಸ್ ಐ ಚಾಮುಂಡೇಶ್ವರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಿಬ್ಬಂದಿಗಳಾದ ಎಂ.ಎನ್ ಹೊನ್ನಪ್ಪನವರ್, ಮಾಂತೇಶ್ ನಾನಗೌಡ, ಗಿರೀಶ್ ತಿಪ್ಪಣ್ಣವರ್, ಸಂಗಮೇಶ್ ಸಾಗರ್, ಎಎಸ್ಐ ನೀಲಮ್ಮನವರ, ಚಂದ್ರು ಜನಗಣವರ್ ಮತ್ತು ಕಾಂತೇಶ್ ರೆಡ್ಡಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ದರೋಡೆಕೋರ-ಭಯೋತ್ಪಾದಕರ ನಂಟು: ದೇಶದ ವಿವಿಧೆಡೆ ಎನ್ಐಎ ದಾಳಿ