ETV Bharat / state

Vnay Kulkarni: ಕೋರ್ಟ್ ಮೇಲೆ ಭರವಸೆ ಇದೆ, ಹೈಕೋರ್ಟ್‌ಗೆ ಆಫೀಲು ಹೋಗುತ್ತೇನೆ: ವಿನಯ್ ಕುಲಕರ್ಣಿ - ETV Bharath Kannada news

ಧಾರವಾಡಕ್ಕೆ ಹೋಗಲು ನಿರ್ಬಂಧ ಇರುವುದರಿಂದ ಸವದತ್ತಿಯಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆ ಮಾಡುತ್ತಿರುವುದಾಗಿ ವಿನಯ್ ಕುಲಕರ್ಣಿ ಹೇಳಿದ್ದಾರೆ.

Vnay Kulkarni
ವಿನಯ್ ಕುಲಕರ್ಣಿ
author img

By

Published : Jul 8, 2023, 3:25 PM IST

ಕೋರ್ಟ್ ಮೇಲೆ ಭರವಸೆ ಇದೆ, ಹೈಕೋರ್ಟ್‌ಗೆ ಆಫೀಲು ಹೋಗುತ್ತೇನೆ: ವಿನಯ್ ಕುಲಕರ್ಣಿ

ಧಾರವಾಡ/ಬೆಳಗಾವಿ: ಕ್ಷೇತ್ರಕ್ಕೆ ಪ್ರವೇಶ ನಿರ್ಭಂಧ ಇದ್ದರೂ, ಹೊರಗಿನಿಂದಲೇ ಡಿಜಿಟಲ್​ ಪ್ರಸಾರ ಮಾಡಿಗೆದ್ದ ವಿನಯ್​ ಕುಲಕರ್ಣಿ, ಕೋರ್ಟ್​ ಮೇಲೆ ಭರವಸೆ ಇದೆ. ನ್ಯಾಯಕ್ಕಾಗಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಅವರು ಹಿಂದಿನ ಸರ್ಕಾರದ ಭ್ರಷ್ಟಾಚಾರ ನೋಡಿ ಜನರು ನಮಗೆ ಅವಕಾಶ‌ ಕೊಟ್ಟಿದ್ದಾರೆ. ಹೀಗಾಗಿ ನಮ್ಮ ಮೇಲೆ ಬಹಳ ಜವಾಬ್ದಾರಿ ಇದೆ. ಈ ಬಾರಿಯ ಬಜೆಟ್​ನಿಂದ ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂಬುದು ಖಾತರಿಯಾಗಿದೆ. ಈ ಮೂಲಕ ಜವಾಬ್ದಾರಿನ್ನು ನಿಭಾಯಿಸುತ್ತೇವೆ ಎಂದರು.

ಧಾರವಾಡಕ್ಕೆ ಬರಲು ಅನಾನುಕೂಲ ಆಗಿದೆ. ಹೀಗಾಗಿ ಸವದತ್ತಿಯಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆ ಇಟ್ಟುಕೊಂಡಿದ್ದೇವೆ. ಕಾರ್ಯಕರ್ತರು ನಮಗೆ ದೊಡ್ಡ ಬಹುಮತ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಎಷ್ಟೇ ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ ಎಂದಿದ್ದಾರೆ. ಬಿಜೆಪಿಯವರು ಸದನದ ಬಾವಿಯಲ್ಲಿ ಇಳಿದು ಸುಳ್ಳು ಆಶ್ವಾಸನೆಯಿಂದ ಅಧಿಕಾರಕ್ಕೆ ಬಂದಿದ್ದೇವೆ ಎಂದು ಧರಣಿ ಮಾಡಿದ್ದಾರೆ. ಮೋಸದಿಂದ ಆಯ್ಕೆಯಾಗಿದ್ದೇವೆ ಎಂದು ಪ್ರತಿಬಿಂಬಿಸಿದ್ದಾರೆ. ಆದರೆ ಈಗ ಬಜೆಟ್‌ನಲ್ಲಿ ಎಲ್ಲ ಗ್ಯಾರಂಟಿಗಳು ಈಡೇರುವ ಬದ್ಧತೆ ಲಭಿಸಿದೆ. ಹೀಗಾಗಿ ಜನತೆಗೂ ನಮ್ಮ ಸರ್ಕಾರದ ಬಗ್ಗೆ ಭರವಸೆ ಇದೆ. ಜನರ ಭರವಸೆಯಂತೆ ನಾವು ಸರ್ಕಾರವನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಶಾಸಕರು ಹೇಳಿದ್ದಾರೆ.

ಪಂಚ ಗ್ಯಾರಂಟಿಗಳಲ್ಲಿ ಜಾರಿಗೆ ಬಂದರುವ ಮೊದಲ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಬಗ್ಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಈಗಾಗಲೇ ಜಾರಿ ಮಾಡಿದ್ದೇವೆ. ಹೆಚ್ಚಿನ ಮಹಿಳೆಯರು ಹುಮ್ಮಸ್ಸಿನಿಂದ ಅದನ್ನು ಸದ್ಭಳಕೆ ಮಾಡುತ್ತಿದ್ದಾರೆ. ಇನ್ನು ಮುಂಗಾರು ಮಳೆ ಎಲ್ಲೆಡೆ ಸರಿಯಾಗಿ ಆಗಿಲ್ಲ, ಹೀಗಾಗಿ ಮಹಿಳೆಯರು ಬಿಡುವಿನ ಸಂದರ್ಭದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಮಳೆ ಬಂದು ಕೃಷಿ ಚಟುವಟಿಕೆ ಆರಂಭವಾದರೆ ಓಡಾಟ ಕಡಿಮೆ ಆಗಲಿದೆ. ಒಟ್ಟಿನಲ್ಲಿ ಯೋಜನೆಯನ್ನು ಜನ ಉತ್ತಮವಾಗಿ ಬಳಿಸಿಕೊಳ್ಳುತ್ತಿದ್ದಾರೆ ಎಂದರು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಬೇಡಿಕೆ ವಿಚಾರಕ್ಕೆ ಮಾತನಾಡಿದ ಅವರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಬೇಡಿಕೆ ಈಡೇರಲು ಸ್ವಲ್ಪ ವಿಳಂಬ ಆಗಬಹುದು, ಆದರೆ ಅವರ ಬೇಡಿಕೆಗಳ ಬಗ್ಗೆ ಸರಿಯಾದ ರೀತಿಯಲ್ಲಿ ಚರ್ಚೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ಕ್ಷೇತ್ರಕ್ಕೆ ಬರಲು ಆಗದ್ದರೂ ಬೆಂಗಳೂರಿನಲ್ಲಿದ್ದು ಗಮನಿಸಿದ್ದೇನೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಆಗಿದೆ. ವಿದ್ಯುತ್ ಕೊರತೆಯೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ನೀರು, ವಿದ್ಯುತ್ ಸಮಸ್ಯೆ ಶೀಘ್ರ ಪರಿಹರಿಸುತ್ತೇವೆ. ಮಳೆ ಇಲ್ಲದೇ ರೈತ ಕೊಳವೆ ಬಾವಿಗಳನ್ನು ನೆಚ್ಚಿಕೊಂಡಿದ್ದಾನೆ. ಅವರನಿಗೆ ವಿದ್ಯುತ್ ಒದಗಿಸುವ ಕೆಲಸ ಮಾಡಲು ಪ್ರಯತ್ನಿಸುತ್ತೇವೆ ಎಂದು ಇದೇ ವೇಳೆ ಹೇಳಿದ್ದಾರೆ.

ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಚಾರಕ್ಕೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ಸಿಗದ ಹಿನ್ನೆಲೆ ಇದರ ಹಿಂದೆ ಹಲವಾರು ಷಡ್ಯಂತ್ರ ಇವೆ. ಅದನ್ನೆಲ್ಲ ನೋಡಿದಾಗ ಬಹಳ‌ ನೋವು ಅನಿಸುತ್ತದೆ. ಇನ್ನೂ ಸಹ ನನಗೆ ಕೋರ್ಟ್ ಮೇಲೆ ಭರವಸೆ ಇದೆ. ಹೈಕೋರ್ಟ್‌ಗೆ ಆಫೀಲು ಹೋಗುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಶೀತ, ಕೆಮ್ಮು, ಗಂಟಲು ನೋವು.. ವಿಶ್ರಾಂತಿಗೆ ಜಾರಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.