ETV Bharat / state

ಎಪಿಎಂಸಿ ಚುನಾವಣಾ ಫಲಿತಾಂಶ: ಅಧ್ಯಕ್ಷರಾಗಿ ಸಡಕೆನ್ನವರ, ಉಪಾಧ್ಯಕ್ಷರಾಗಿ ನಾಯ್ಕರ್​ ಆಯ್ಕೆ - Sahadevappa Sadekennavar

ಹುಬ್ಬಳ್ಳಿ ನಗರದ ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಶಾಂತಿಯುತವಾಗಿ ಜರುಗಿತು. ಅಧ್ಯಕ್ಷರಾಗಿ ಸಹದೇವಪ್ಪ ಸಡಕೆನ್ನವರ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ನಾಯ್ಕರ್​ ಆಯ್ಕೆಯಾಗಿದ್ದಾರೆ.

APMC Election
ಎಪಿಎಂಸಿ ಚುನಾವಣೆ
author img

By

Published : Jul 9, 2020, 6:16 PM IST

ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಇಂದು ಜರುಗಿತು. ಅಧ್ಯಕ್ಷರಾಗಿ ಸಹದೇವಪ್ಪ ಸಡಕೆನ್ನವರ 11 ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಸವರಾಜ ನಾಯ್ಕರ್​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಹಶೀಲ್ದಾರ್​ ಮತ್ತು ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ನಗರದ ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಶಾಂತಿಯುತವಾಗಿ ನಡೆಯಿತು.

ಚುನಾವಣೆ ವೇಳಾಪಟ್ಟಿಯಂತೆ 17 ಸದಸ್ಯರಲ್ಲಿ ಮೂರು ಜನರು ನಾಮಪತ್ರ ಸಲ್ಲಿಸಿದ್ದರು‌. ಈ ಹಿನ್ನೆಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಿ, ಫಲಿತಾಂಶವನ್ನು ತಹಶೀಲ್ದಾರ್ ಪ್ರಕಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.