ETV Bharat / state

ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ.. ರಕ್ತಸಿಕ್ತ ಪರಿಸ್ಥಿತಿಯಲ್ಲೇ ಪೊಲೀಸ್​ ಠಾಣೆಗೆ ಬಂದ ಯುವಕ! - ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಚಾಕು ಇರಿತ

ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಜಗಳದಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿದಿರುವ ಪ್ರಕರಣ ನಡೆದಿದೆ.

Kn_hbl_0
ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ
author img

By

Published : Sep 28, 2022, 1:18 PM IST

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚಾಕು ಇರಿತ ಮಾಡಿರುವ ಘಟನೆ ನಗರದ ಕಸಬಾ ಠಾಣಾ ವ್ಯಾಪ್ತಿಯ ಕೊತಂಬರಿ ಆಟೋ ಸ್ಟ್ಯಾಂಡ್ ಬಳಿ‌ ನಡೆದಿದೆ.

ಕರ್ಜಗಿ ಓಣಿಯ ನಿವಾಸಿ ಮಹಮ್ಮದ್ ಚಾಕು ಇರಿತಕ್ಕೆ ಒಳಗಾದವರು. ಇರ್ಫಾನ್​ ಚಾಕುವಿನಿಂದ ಇರಿದು ಪರಾರಿಯಾದ ಆರೋಪಿ. ನಗರದ ಕೊತ್ತಂಬರಿ ಆಟೋ ಸ್ಟ್ಯಾಂಡ್ ಬಳಿ ಮಹಮ್ಮದ್ ‌ನಿಂತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಇರ್ಫಾನ್, ಮೊಹಮ್ಮದ್​ ಅವರ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ‌.

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ

ಇನ್ನು, ಇರಿತಕ್ಕೊಳಗಾದ ಮಹಮ್ಮದ್ ರಕ್ತಸಿಕ್ತ ಸ್ಥಿತಿಯಲ್ಲೇ ಹಳೇ ಹುಬ್ಬಳ್ಳಿ ಪೊಲೀಸ್​​ ಠಾಣೆಯಲ್ಲಿ ದೂರು ನೀಡಲು ಬಂದಿದ್ದಾರೆ. ಮೊಹಮ್ಮದ್​ ಅವರಿಗೆ ರಕ್ತಸ್ರಾವ ಆಗುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣವೇ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹುಕ್ಕೇರಿ ಬಾಲಕನ ರುಂಡ ಕತ್ತರಿಸಿದ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.