ಹುಬ್ಬಳ್ಳಿ: ಕೊರೊನಾ ದುಡಿಯುವ ಕೈಗಳಿಂದ ಉದ್ಯೋಗ ಕಸಿದುಕೊಂಡದ್ದು, ಗ್ರಾಮೀಣ ಭಾಗದಲ್ಲಿ ಕೆಲಸವಿಲ್ಲದೇ ಜನ ಒಂದೊತ್ತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಗ್ರಾರ್ಮೆಂಟ್ಸ್ ಉದ್ಯಮಿಯೊಬ್ಬರು ಗ್ರಾಮೀಣ ಭಾಗದ ಮಹಿಳೆಯರಿಗೆ ಕೆಲಸ ನೀಡಿ ಆಸರೆಯಾಗಿದ್ದಾರೆ.
ಗ್ರಾರ್ಮೆಂಟ್ಸ್ ಉದ್ಯಮಿ ಪ್ರವೀಣ ಬೊರೋಟ್, ಈತ ವೈದ್ಯಕೀಯ ಸೇವೆಗೆ ಕೈ ಜೋಡಿಸುವ ಸದುದ್ದೇಶದಿಂದ ಪಿಪಿಇ ಕಿಟ್ ತಯಾರಿ ಮಾಡಿಸುತ್ತಿದ್ದಾರೆ. ಹೌದು, ಕೊರೊನಾ ಎರಡನೇ ಅಲೆಯಿಂದ ಸೋಂಕಿತರಿಗೆ ಆಕ್ಸಿಜನ್, ವೆಂಟಿಲೇಟರ್ ಸಿಗುತ್ತಿಲ್ಲ. ಇನ್ನೊಂದೆಡೆ ಪಿಪಿಇ ಕಿಟ್ಗಳ ಪೊರೈಕೆ ಕೂಡ ಆಗುತ್ತಿಲ್ಲ. ಇದೀಗ ಪಿಪಿಇ ಕಿಟ್ಗಳಿಗೆ ಭಾರಿ ಬೇಡಿಕೆ ಬಂದಿದೆ.
ಹಾಗಾಗಿ ಹುಬ್ಬಳ್ಳಿ ತಾಲೂಕಿನ ಭೂ ಅರಳಿಕಟ್ಟಿ ಗ್ರಾಮದಲ್ಲಿ ಪ್ರವೀಣ ಬೋರೂಟ್ ಗ್ರಾಮೀಣ ಭಾಗದ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಂದ ಪಿಪಿಇ ಕಿಟ್ ಹೊಲಿಗೆ ಮಾಡಿಸುವ ಮೂಲಕ ವೈದ್ಯರಿಗೆ ಹಾಗೂ ಆಸ್ಪತ್ರೆಗಳಿಗೆ ಕಡಿಮೆ ದರದಲ್ಲಿ ಪಿಪಿಇ ಕಿಟ್ಗಳನ್ನು ಪೊರೈಸುತ್ತಿದ್ದಾರೆ. ನಿತ್ಯ 40ಕ್ಕೂ ಹೆಚ್ಚು ಮಹಿಳೆಯರು 250 ರಿಂದ 500 ಪಿಪಿಇ ಕಿಟ್ ಹೊಲಿಗೆ ಮಾಡುತ್ತಿದ್ದಾರೆ. ಇದರ ಜೊತೆಗೆ ಮೃತದೇಹಗಳಿಗೆ ಬಾಡಿ ಕವರ್ ಹೊಲಿಗೆ ಮಾಡಿಸಿಕೊಡಲಾಗುತ್ತಿದೆ.