ಹುಬ್ಬಳ್ಳಿ : ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಮತ್ತೆ ಬಸವರಾಜ ಹೊರಟ್ಟಿ ದಾಖಲೆಯ ಜಯ ಸಾಧಿಸಿದ್ದಾರೆ. ಇವರ ಈ ದಾಖಲೆ ಗೆಲುವಿನ ಜೊತೆಗೆ ಅಂಬಾಸಿಡರ್ ಕಾರಿನ ಮೇಲೆ ಅವರು ಇಟ್ಟ ನಂಬಿಕೆಯೂ ಗೆದ್ದಿದೆ.
ಬಸವರಾಜ್ ಹೊರಟ್ಟಿ ಅವರ ಅದೃಷ್ಟವನ್ನು ಅವರ ನೆಚ್ಚಿನ ಅಂಬಾಸಿಡರ್ ಕಾರು ಮತ್ತೊಮ್ಮೆ ಸಾಬೀತು ಮಾಡಿದೆ. ಇದೇ ಅಂಬಾಸಿಡರ್‌ನಲ್ಲಿ ಬಂದು ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದರು. ಈ ಕಾರಿನೊಡನೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಹೊರಟ್ಟಿ ಅವರು ಶುಭ ಕಾರ್ಯಗಳಿಗೆ ಈ ಕಾರ್ನಲ್ಲಿ ಹೋಗುತ್ತೇನೆಂದು ತಿಳಿಸಿದ್ದರು.
ಪ್ರಥಮ ಚುನಾವಣೆಯಿಂದ ಈ ಚುನಾವಣೆವರೆಗೂ ಇದೇ ಕಾರನ್ನು ಹೊರಟ್ಟಿ ಅವರು ಉಪಯೋಗ ಮಾಡಿದ್ದಾರೆ. ಇದೇ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಆ ಕಾರಣಕ್ಕಾಗಿ ಬಸವರಾಜ ಹೊರಟ್ಟಿ ಅವರಿಗೆ ಈ ಕಾರು ಲಕ್ಕಿ ಎಂದು ಸಾಬೀತಾಗಿದೆ. ಈಗಾಗಲೇ ಈ ಕಾರು 8 ಲಕ್ಷ ಕಿ.ಮೀ ಓಡಿದೆ. 5757 ಅಂದ್ರೆ ಎಲ್ಲರಿಗೂ ಪರಿಚಯ. ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತ್ತಾರೆ.
ಇದನ್ನೂ ಓದಿ: 5757 ನಂಬರ್‌ನ ಅಂಬಾಸಿಡರ್ ಕಾರು ಬಸವರಾಜ ಹೊರಟ್ಟಿ ಅವರಿಗೆ ಲಕ್ಕಿ.. 8ನೇ ಬಾರಿ ಗೆದ್ದರೇ ರೆಕಾರ್ಡ್!