ಹುಬ್ಬಳ್ಳಿ: ಬಡವರಿಗೆ, ನಿರ್ಗತಿಕರಿಗೆ ಜಿಲ್ಲಾಡಳಿತ ಒದಗಿಸುವ ಆಹಾರ ಕಿಟ್ನಲ್ಲಿ ತಾರತಮ್ಯದ ಆರೋಪ ಹುಬ್ಬಳ್ಳಿ ನಗರದಲ್ಲಿ ಕೇಳಿ ಬಂದಿದೆ.
ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಘೋಷಿಸಿದ್ದು, ಕಾರ್ಮಿಕ ವರ್ಗ ಕೆಲಸವಿಲ್ಲದೇ ಕಂಗಾಲಾಗಿತ್ತು. ದಿನಗೂಲಿ ನಂಬಿ ಬದುಕು ಕುಟುಂಬಗಳು ಆಹಾರಕ್ಕಾಗಿ ಹಪಹಪಿಸುವಂತಾಗಿತ್ತು. ಇವರ ಸಹಾಯಕ್ಕೆ ಜಿಲ್ಲಾಡಳಿತ ಸಹಾಯವಾಣಿ ತೆರೆದು ಸಂಘ-ಸಂಸ್ಥೆಗಳು, ದಾನಿಗಳು ನೀಡಿದ ಆಹಾರ ಧಾನ್ಯಗಳ ಕಿಟ್ಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಆದರೆ, ಆಹಾರ ಕಿಟ್ಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಾವೂ ಬಡವರು ನಮಗೂ ನೀಡಿ: ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಮುಖಂಡರು ಮನೆ ಬಾಗಿಲಿಗೆ ಬರುತ್ತಾರೆ. ಈಗ ಆಹಾರದ ಕೊರೆತೆಯಿಂದ ನರಳಾಡುತ್ತಿದ್ದೇವೆ. ಮನೆಯಲ್ಲಿ ಮಕ್ಕಳಿದ್ದಾರೆ. ಯಾವುದೇ ತಾರತಮ್ಯ ಮಾಡದೇ ನಮಗೂ ಕಿಟ್ಗಳನ್ನು ವಿತರಿಸಿ ಎಂದು ಸ್ಥಳೀಯರಾದ ಗೌರಮ್ಮ ಮನವಿ ಮಾಡಿದ್ದಾರೆ.