ಧಾರವಾಡ: ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಜೈಲು ಸೇರಿರುವ ಕಾಶ್ಮೀರಿ ಯುವಕರ ಪರ ಜಾಮೀನು ಅರ್ಜಿ ಸಲ್ಲಿಸಿಲು ಬೆಂಗಳೂರಿನಿಂದ ಕೆಲ ವಕೀಲರು ಬಂದಿದ್ದರು. ಈ ವೇಳೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ವಕೀಲರು ಕೋರ್ಟ್ ಆಡಳಿತಾಧಿಕಾರಿಗೆ ಅರ್ಜಿ ಸಲ್ಲಿಸದೇ ನೇರವಾಗಿ ಬಂದ ಹಿನ್ನೆಲೆ ನ್ಯಾಯಾಧೀಶರು ಅರ್ಜಿಯನ್ನು ಮರಳಿಸಿದ್ದಾರೆ. ಆರೋಪಿಗಳ ಪರ ವಕೀಲರು ಮೊದಲು ಆಡಳಿತಾಧಿಕಾರಿಗೆ ಜಾಮೀನು ಅರ್ಜಿ ಸಲ್ಲಿಸಬೇಕಿತ್ತು. ಇವರು ಮೊದಲೇ ಅರ್ಜಿ ಸಲ್ಲಿಸದ ಕಾರಣ ಖಾಲಿ ಕೈಯಲ್ಲಿ ವಕೀಲರು ಹಿಂದಿರುಗಿದ್ದಾರೆ.
ವಕೀಲರು ಕೋರ್ಟ್ನಿಂದ ಹೊರಡುವ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಇದೇ ಸಂದರ್ಭದಲ್ಲಿ ವಕೀಲರು ಬಂದಿದ್ದ ಕಾರಿನ ಹಿಂಬದಿಯ ಗಾಜು ಪುಡಿ ಪುಡಿಯಾಗಿದೆ. ಸ್ಥಳೀಯ ವಕೀಲರು ಆರೋಪಿಗಳ ಪರ ವಕೀಲರ ಕಾರನ್ನು ಸುತ್ತವರೆದಿದ್ದು ಕಂಡುಬಂತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.