ಹುಬ್ಬಳ್ಳಿ: ಸಾಧನೆ ಮಾಡಬೇಕೆನ್ನುವ ಛಲವಿರುವವರಿಗೆ ಗುರಿ ಎಷ್ಟೇ ದೊಡ್ಡದಿದ್ದರು ಅದನ್ನು ಸಾಧಿಸಿ ಕೀರ್ತಿ ಪತಾಕೆ ಹಾರಿಸುತ್ತಾರೆ ಎಂಬುದಕ್ಕೆ ಹುಬ್ಬಳ್ಳಿ ಪರ್ವತಾರೋಹಿ ಸಾಕ್ಷಿಯಾಗಿದ್ದಾರೆ. ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರ ಆಫ್ರಿಕಾ ಖಂಡದ ಮೌಂಟ್ ಕಿಲಿಮಂಜಾರೋ ಪರ್ವತ ಶಿಖರವನ್ನು ಏರಿ ಮಹತ್ವದ ಸಾಧನೆ ಮಾಡಿದ್ದಾರೆ.
ಹುಬ್ಬಳ್ಳಿಯ ಗಿರೀಶ್ ಹಲ್ಲೂರು ಎಂಬುವರೇ ಈ ಸಾಧನೆ ಮಾಡಿದ್ದು, ಇವರ ಸಾಧನೆ ನಮ್ಮ ಎಷ್ಟೋ ಯುವಕರಿಗೆ ಸ್ಪೂರ್ತಿಯಾಗಿದೆ. ಬೆಂಗಳೂರಿನ ಬ್ಯಾಂಕ್ ಒಂದರಲ್ಲಿ ಸಿಬ್ಬಂದಿಯಾಗಿರುವ ಗಿರೀಶ್ ಪರ್ವತಾರೋಹಣದಲ್ಲಿ ತ್ರಿವಿಕ್ರಮನಾಗಿದ್ದಾರೆ. ಸುಮಾರು 8 ದಿನ ಚಾರಣ ಮಾಡಿ ಆಫ್ರಿಕಾ ಖಂಡದ ಕಿಲಿಮಂಜಾರೋ ಪರ್ವತ ಶಿಖರ 5895 ಮೀಟರ್ (19341ಫೀಟ್) ಏರಿ ಹುಬ್ಬೇರುವ ಸಾಧನೆ ಮಾಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಹುಲ್ಲೂರು ಪರ್ವಾತಾರೋಹಣ, ಟ್ರಕ್ಕಿಂಗ್‌ನಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಪರ್ವತಾರೋಹಣದ ಬಗ್ಗೆ ಆಳವಾದ ಅಧ್ಯಯನ ಮಾಡಿ ರಾಜ್ಯ, ದೇಶದ ವಿವಿಧೆಡೆಯ ಪರ್ವತ, ಬೆಟ್ಟಗಳನ್ನು ಹತ್ತಿ ವಾಪಸ್ ಆಗಿದ್ದರು.
ಆಗಸ್ಟ್ 8ರಂದು ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ಆ ನಂತರ ಶರ್ಜಾ ಮೂಲಕ ನೈರೋಬಿ ತಲುಪಿದ ಗಿರೀಶ್ ಆಫ್ರಿಕಾದ ಕಿಲಿಮಂಜಾರೋ ಪರ್ವತವನ್ನು 8 ದಿನದಲ್ಲಿ ಏರಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಹುಬ್ಬಳ್ಳಿಯ ಗಿರೀಶ್ ಪರ್ವತ ಹತ್ತಿ ಯಶ ಸಾಧಿಸಿದ್ದಾರೆ. ಹುಬ್ಬಳ್ಳಿಯ ಗಿರೀಶ್ ಅವರ ಸಾಧನೆ ಇತರರಿಗೂ ಮಾದರಿಯಾಗುವುದರ ಜೊತೆಗೆ ಹುಬ್ಬಳ್ಳಿ ಕೀರ್ತಿಯನ್ನು ಸಾಗರದಾಚೆಗೆ ಪಸರಿಸಿದ್ದು ಹುಬ್ಬಳ್ಳಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಇದನ್ನೂ ಓದಿ: ಮೌಂಟ್ ಎವರೆಸ್ಟ್ ಏರಿದ ಆರು ಮಂದಿಯಿಂದ ಹೊಸ ದಾಖಲೆ..!