ಹುಬ್ಬಳ್ಳಿ : ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೈಕ್ ಕಳ್ಳತನ ಆರೋಪದ ವಿಚಾರಣೆಗಾಗಿ ಪೊಲೀಸರು ಹುಬ್ಬಳ್ಳಿ/ 1ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಮುಂಬೈ ಜೈಲಿನಿಂದ ಬಾಡಿ ವಾರಂಟ್ ಮೇಲೆ ಹುಬ್ಬಳ್ಳಿಗೆ ಕರೆ ತಂದಿದ್ದ ಗ್ರಾಮೀಣ ಠಾಣೆ ಪೊಲೀಸರು, ವಿಚಾರಣೆ ಮುಗಿದ ನಂತರ ಬೈಕ್ ಮಹಜರು ನಡೆಸಲು ಠಾಣೆಗೆ ಕರೆದೊಯ್ದರು.
ಗೌರಿ ಹತ್ಯೆ ಪ್ರಕರಣದಲ್ಲಿ ಬೈಕ್ ಬಳಸಲಾಗಿತ್ತು. ಆ ಬೈಕ್ ಹುಬ್ಬಳ್ಳಿ ತಾಲೂಕಿನ ಮಾವನೂರಲ್ಲಿ ಕಳ್ಳತನ ಮಾಡಲಾಗಿತ್ತು. ಈ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇದೀಗ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು.
ಇದನ್ನೂ ಓದಿ: ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್; ಸಿಸಿಬಿಯಿಂದ ಪ್ರಕರಣದ ತನಿಖೆ