ETV Bharat / state

ಯೋಗೀಶ್​ ಗೌಡ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮುತ್ತಗಿ ಹೇಳಿದ್ದೇನು? - accused Basavaraja muttagi Response

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ ಗೌಡನನ್ನು ಹತ್ಯೆ ಮಾಡುವಂತೆ ಸುಪಾರಿ ನೀಡಿದ್ದ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ. ಈ ನಡುವೆ ಮುತ್ತಗಿ ಹತ್ಯೆಗೂ ಸ್ಕೆಚ್​ ಹಾಕಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದ್ದು, ಈ ಕುರಿತಂತೆ ಅವರು ಪ್ರತಿಕ್ರಿಯಿಸಿದ್ದಾರೆ.

Accused Basavaraja mutthagi response on Yogish gowda muder case
ಯೋಗೀಶ್​ ಗೌಡ ಹತ್ಯೆಗೆ ಸುಪಾರಿ ವಿಚಾರ: ಹತ್ಯೆ ಸುದ್ದಿ ಸುಳ್ಳಾಗಿರಲಿ ಎಂದ ಆರೋಪಿ ಮುತ್ತಗಿ
author img

By

Published : Dec 13, 2020, 3:07 PM IST

ಧಾರವಾಡ: ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ‌ ಬಸವರಾಜ ಮುತ್ತಗಿ ಪ್ರತಿಕ್ರಿಯಿಸಿದ್ದಾರೆ.

ಸಿಬಿಐ ತನಿಖೆ ಕುರಿತು ಆರೋಪಿ ಮುತ್ತಗಿ ಪ್ರತಿಕ್ರಿಯೆ

ಇಲ್ಲಿನ ಉಪನಗರ ‌ಪೊಲೀಸ್ ಠಾಣೆಯಲ್ಲಿ ‌ನಡೆದ ವಿಚಾರಣೆ ಬಳಿಕ‌ ಹೊರಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರ ಇನ್ನೂ ತನಿಖೆ ಹಂತದಲ್ಲಿದೆ. ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ. ತನ್ನ ಹತ್ಯೆಗೂ ಸುಪಾರಿ ನೀಡಲಾಗಿತ್ತು ಎಂಬ ಬಗ್ಗೆ ವದಂತಿ ಹರಿದಾಡುತ್ತಿದೆ. ಈ ಸುದ್ದಿ ದೇವರ ದಯೆಯಿಂದ ಸುಳ್ಳಾಗಿರಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಜಿಲ್ಲಾ ಪಂಚಾಯತ್ ಸದಸ್ಯ​ ಯೋಗೀಶ ಗೌಡನನ್ನು ಹತ್ಯೆ ಮಾಡುವಂತೆ ಸುಪಾರಿ ನೀಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.