ಹುಬ್ಬಳ್ಳಿ: ತನ್ನ ದೊಡ್ಡಮ್ಮನನ್ನೇ ಕೊಂದು ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಾಂತೇಶ ಚಿಕ್ಕಮಠ ಬಂಧಿತ ಆರೋಪಿ. ಹಳೇ ಹುಬ್ಬಳ್ಳಿಯ ರಣದಮ್ಮ ಕಾಲೋನಿಯ ನಿವಾಸಿ ಕಮಲಮ್ಮ (72) ಕೊಲೆಯಾದವರು.
ಅಕ್ಟೋಬರ್ 24 ರಂದು ಕಮಲಮ್ಮನವರ ಮನೆಗೆ ಬಂದಿದ್ದ ಆರೋಪಿ ಮಹಾಂತೇಶ ಚಿಕ್ಕಮಠ ಬಂಗಾರದ ಆಸೆಗೆ ನಿದ್ರಿಸುತ್ತಿದ್ದ ದೊಡ್ಡಮ್ಮನನ್ನು ಕೊಂದು, ಕಿವಿಯೋಲೆ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದ ಹುಬ್ಬಳ್ಳಿಯ ಕಸಬಾಪೇಟ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇದನ್ನೂ ಓದಿ: ದಾವಣಗೆರೆ: ಪ್ರೇಯಸಿಯ ಕೊಲೆ ಮಾಡಿ ತಾನೂ ವಿಷ ಸೇವಿಸಿ ಪ್ರಾಣಬಿಟ್ಟ!