ಹುಬ್ಬಳ್ಳಿ : ಮನಸ್ವಿನಿ ಯೋಜನೆಯ ಹಣ ಬಿಡುಗಡೆಗೆ 600 ರೂಪಾಯಿ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಓದಿ : ಫೇಕ್ ಫೇಸ್‌ಬುಕ್ ಐಡಿ; 14 ಲಕ್ಷ ರೂ. ದೋಚಿದ 'ಸುಶ್ಮಾ' !
ಕುಂದಗೋಳ ತಾಲೂಕು ಕಂದಾಯ ನಿರೀಕ್ಷಕ ಶಿವಾನಂದ ಶಿರಹಟ್ಟಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಬೆಟದೂರಿನ ಮಹಿಳೆಯೊಬ್ಬರಿಗೆ ಮನಸ್ವಿನಿ ಯೋಜನೆಗಾಗಿ 600 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಕುರಿತಂತೆ ಮಹಿಳೆ ಎಸಿಬಿಗೆ ದೂರು ನೀಡಿದ್ದರು, ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಎಸಿಬಿ ಡಿಎಸ್ಪಿ ವೇಣುಗೊಪಾಲ ನೇತೃತ್ವದ ತಂಡ ಮಹಿಳೆಯಿಂದ ಲಂಚ ಪಡೆಯುವಾಗ ಬಂಧಿಸಿದ್ದಾರೆ.