ETV Bharat / state

ಹುಬ್ಬಳ್ಳಿ ವಿಭಾಗದ ಎಸಿ ಬಸ್ ಸಂಚಾರ ಪುನರಾರಂಭ - HUbli KSRTC division

ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್​​ಗಳನ್ನು ರಸ್ತೆಗಿಳಿಸಲಾಗುತ್ತದೆ. ಬಸ್ಸಿನ ಒಳಗಡೆ ನಿಗದಿತ ತಾಪಮಾನವನ್ನು ನಿರ್ವಹಣೆ ಮಾಡಲಾಗುತ್ತದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಲೀಪರ್ ಬಸ್ಸಿನಲ್ಲಿ 20 ಹಾಗೂ ವೋಲ್ವೋ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.

AC Bus Traffic for Hubli Division starts from tomorrow
ಎಸಿ ಬಸ್ ಸಂಚಾರ ಪುನರಾರಂಭ
author img

By

Published : Jul 26, 2020, 10:29 PM IST

ಹುಬ್ಬಳ್ಳಿ : ಲಾಕ್​ಡೌನ್ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್​ಗಳ ಸಂಚಾರವನ್ನು ಸರ್ಕಾರದ ಅನುಮತಿ ಮೇರೆಗೆ ಸೋಮವಾರದಿಂದ ಪುನರಾರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಮೈಸೂರಿನ ನಡುವೆ ಎಸಿ ಸ್ಲೀಪರ್ ಮತ್ತು ವೋಲ್ವೋ ಬಸ್​ಗಳ ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ವೋಲ್ವೋ ಬಸ್​ ಮಧ್ಯಾಹ್ನ 03-00 ಗಂಟೆಗೆ ಮತ್ತು ರಾತ್ರಿ 10.30 ಗಂಟೆಗೆ ಹೊರಡುತ್ತದೆ. ಎಸಿ ಸ್ಲೀಪರ್ ರಾತ್ರಿ 10.40 ಗಂಟೆಗೆ ಹೊರಡುತ್ತದೆ. ಹುಬ್ಬಳ್ಳಿಯಿಂದ ಮೈಸೂರಿಗೆ ಎಸಿ ಸ್ಲೀಪರ್ ರಾತ್ರಿ 09.45ಕ್ಕೆ ಹೊರಡುತ್ತದೆ.

ಎಸಿ ಬಸ್​ಗಳಲ್ಲದೆ, ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಬಸ್​ಗಳು ಎಂದಿನಂತೆ ಸಂಚರಿಸಲಿವೆ. ನಾನ್ ಎಸಿ ಸ್ಲೀಪರ್- ರಾತ್ರಿ 08.30, 09.00 ಹಾಗೂ 10.00 ಗಂಟೆ, ರಾಜಹಂಸ ಬಸ್ ಸಂಜೆ 07.30ಕ್ಕೆ ಹೊರಡಲಿವೆ.

AC Bus Traffic for Hubli Division starts from tomorrow ಎಸಿ ಬಸ್ ಸಂಚಾರ ಪುನರಾರಂಭ
ಎಸಿ ಬಸ್ ಸಂಚಾರ ಪುನರಾರಂಭ

ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್​​ಗಳನ್ನು ರಸ್ತೆಗಿಳಿಸಲಾಗುತ್ತದೆ. ಬಸ್ಸಿನ ಒಳಗಡೆ ನಿಗದಿತ ತಾಪಮಾನವನ್ನು ನಿರ್ವಹಣೆ ಮಾಡಲಾಗುತ್ತದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಲೀಪರ್ ಬಸ್ಸಿನಲ್ಲಿ 20 ಹಾಗೂ ವೋಲ್ವೋ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.

ಸುರಕ್ಷತೆಯ ದೃಷ್ಟಿಯಿಂದ ಬಸ್ಸಿನಲ್ಲಿ ಪ್ರಯಾಣಿಕರಿಗೆ ಬ್ಲಾಂಕೆಟ್​ಗಳನ್ನು ನೀಡುವುದಿಲ್ಲ. ಮಾರ್ಗ ಮಧ್ಯದಲ್ಲಿ ಊಟೋಪಚಾರಕ್ಕಾಗಿ ನಿಲುಗಡೆ ಇರುವುದಿಲ್ಲ. ಆದ್ದರಿಂದ ಪ್ರಯಾಣಿಕರು ಊಟ, ತಿಂಡಿ ಮತ್ತು ನೀರನ್ನು ಮನೆಯಿಂದಲೇ ತರಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.