ಧಾರವಾಡ: ವಿದ್ಯಾರ್ಥಿಗಳು ಹೊಸ ವರ್ಷಾಚರಣೆ ಮಾಡಿದ್ದಕ್ಕೆ ಕೋಪಗೊಂಡ ಶಾಲೆಯ ಮುಖ್ಯ ಶಿಕ್ಷಕ ವಿದ್ಯಾರ್ಥಿಗಳ ಮೇಲೆ ಕ್ರೌರ್ಯ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಧಾರವಾಡದ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ವೀರಣ್ಣ ಬೋಳಶೆಟ್ಟರ್ ವಿರುದ್ಧ ವಿದ್ಯಾರ್ಥಿಗಳು ಈ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳು ಶಾಲೆಯ ಕೊಠಡಿಯನ್ನು ಅಲಂಕರಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದರು. ಕಾರ್ಯಕ್ರಮಕ್ಕೆ ಶಾಲೆಯ ಇತರೆ ಶಿಕ್ಷಕರು ಕೂಡಾ ಹೋಗಿ ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದರು. ಇದೆಲ್ಲಾ ನಡೆದ ಬಳಿಕ ಕೋಪಗೊಂಡ ಮುಖ್ಯ ಶಿಕ್ಷಕ ವೀರಣ್ಣ ಬೋಳಶೆಟ್ಟರ್ ಯಾರ ಅನುಮತಿ ತೆಗೆದುಕೊಂಡು ಹೀಗೆ ಮಾಡಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗ್ತಿದೆ.
ಯುಪಿಎಸ್ ಶಾಲೆಯ ಎಂಟನೇ ತರಗತಿಯ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವೇಳೆ ಗಾಯಗೊಂಡಿದ್ದಾರೆ. ಇನ್ನು, ಈ ಶಾಲೆಯಲ್ಲಿ ಹೊಡೆತ ತಿಂದ ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಂದ ಧಾರವಾಡಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.