ಧಾರವಾಡ/ಬೆಂಗಳೂರು : ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ವಸತಿ ನಿಲಯದ ತನ್ನ ಕೋಣೆಯಲ್ಲಿ ನಗ್ನವಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಹಾಸ್ಟೆಲ್ ಮೆಸ್‌ನಲ್ಲಿ ಊಟ ಮಾಡಿದ ನಂತರ ಈತ ತನ್ನ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬ ಸದಸ್ಯರು ಹಾಗೂ ಗೆಳೆಯರು ಕರೆ ಮಾಡಿದರು ಸ್ವೀಕರಿಸಲಿಲ್ಲ ಎಂಬ ಹಿನ್ನೆಲೆಯಲ್ಲಿ ಕಿಟಕಿಯಿಂದ ಓರ್ವ ಇಣುಕಿ ನೋಡಿದಾಗ ವಿದ್ಯಾರ್ಥಿ ಹಾಸ್ಟೆಲ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ವಾರ್ಡನ್ ಹಾಗೂ ಆಡಳಿತ ಮಂಡಳಿಯಿಂದ ಪೊಲೀಸರಿಗೆ ಮಾಹಿತಿ.. ವಾರ್ಡನ್ ಹಾಗೂ ಕೃಷಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ತಕ್ಷಣವೇ ಪೊಲೀಸರಿಗೆ ಹಾಗೂ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ವಿದ್ಯಾರ್ಥಿ ಪೋಷಕರು ತಡ ರಾತ್ರಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಿಂದ ಧಾರವಾಡಕ್ಕೆ ಆಗಮಿಸಿದ ನಂತರ ಮೃತದೇಹವನ್ನು ಕೆಳಗೆ ಇಳಿಸಿ ಆಸ್ಪತ್ರೆಗೆ ಕಳಿಸಲಾಯಿತು. ಪೊಲೀಸರು ವಿದ್ಯಾರ್ಥಿಯ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ನಗ್ನವಾಗಿ ಈ ವಿದ್ಯಾರ್ಥಿ ಏಕೆ ನೇಣು ಹಾಕಿಕೊಂಡ ಎಂಬುದರ ಕುರಿತು ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಿಜಯನಗರ: ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರ ಸಾವು
ತೆಂಗಿನ ಮರವೇರಿ ಪ್ರಜ್ಞಾಹೀನನಾದ ವ್ಯಕ್ತಿಯ ರಕ್ಷಣೆ : ತೆಂಗಿನ ಮರ ಹತ್ತಿ ಪ್ರಜ್ಞೆ ತಪ್ಪಿ ಮರದಲ್ಲೇ ಸಿಲುಕಿದ್ದವನನ್ನು ಅಗ್ನಿಶಾಮಕ ಹಾಗೂ ಸಿವಿಲ್ ಡಿಫೆನ್ಸ್ ಸಿಬ್ಬಂದಿ ರಕ್ಷಿಸಿರುವ ಘಟನೆ ಬೆಂಗಳೂರಿನ ಮೈಲಸಂದ್ರದ ವಿಜಯಶ್ರೀ ಲೇಔಟ್ನಲ್ಲಿ ನಡೆದಿದೆ. ಮರ ಹತ್ತಿದ್ದ ವ್ಯಕ್ತಿಯೊಬ್ಬ ಅಲ್ಲೇ ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ್ದ ಸಿವಿಲ್ ಡಿಫೆನ್ಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಮಾರು 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಮರ ಹತ್ತಿದ್ದ ವ್ಯಕ್ತಿ ಅಸ್ವಸ್ಥನಂತೆ ಕಾಣುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಆರ್ಥಿಕ ಸಂಕಷ್ಟಕ್ಕೆ ತಂಗಿ ಮದುವೆ ದಿನವೇ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ: ಶಿವಮೊಗ್ಗ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಕಾರ್ಖಾನೆಯ ಗುತ್ತಿಗೆ ಕಾರ್ಮಿಕನೊಬ್ಬ ಆರ್ಥಿಕ ಸಮಸ್ಯೆಯಿಂದ ಮನನೊಂದು ಅತ್ತ ತಂಗಿಯ ಮದುವೆ ನಡೆಯುತ್ತಿದ್ದರೆ ಇತ್ತ ಅಣ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ. ದುರ್ವಿವಿಧಿಯೆಂದರೆ ಮೃತ ಪೋಷಕರಿಗೆ ತನ್ನ ಮಗ ಸಾವಿಗೆ ಶರಣಾಗಿರುವ ವಿಷಯ ತಿಳಿದರೂ ಸಹ ಎಲ್ಲಿ ಇಂದು ಮಗಳ ಮದುವೆ ನಡೆಯದಿದ್ದರೆ ಮುಂದೆ ಸಾಧ್ಯವಿಲ್ಲ ಎಂದು ತಿಳಿದು, ತಮ್ಮ ದುಃಖವನ್ನು ಮನಸಲ್ಲೇ ಅದುಮಿಟ್ಟುಕೊಂಡು ಮಗಳ ಕನ್ಯಾದಾನ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಆರ್ಥಿಕ ಸಂಕಷ್ಟ.. ತಂಗಿ ಮದುವೆ ದಿನವೇ ಭದ್ರಾವತಿಯಲ್ಲಿ ಕಾರ್ಮಿಕ ಆತ್ಮಹತ್ಯೆ