ETV Bharat / state

ಹುಬ್ಬಳ್ಳಿ: ಮೊಬೈಲ್​ಗೆ ಬಂದ ಲಿಂಕ್ ಕ್ಲಿಕ್ಕಿಸಿ ಸಾವಿರಾರು ರೂಪಾಯಿ ಕಳೆದುಕೊಂಡ ವ್ಯಕ್ತಿ

author img

By

Published : Aug 20, 2021, 10:01 AM IST

ಮೊಬೈಲ್​ಗೆ ಬಂದ ಲಿಂಕ್ ತೆರೆದು ಬ್ಯಾಂಕ್ ಖಾತೆ ವಿವರ ತುಂಬಿದ ವ್ಯಕ್ತಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಬ್ಯಾಂಕ್​ ಹೆಸರಲ್ಲಿ ಲಿಂಕ್ ಕಳುಹಿಸಿದ್ದ ಕಳ್ಳರು ಖಾತೆಯಲ್ಲಿದ್ದ ಹಣ ಎಗರಿಸಿದ್ದಾರೆ.

a-man-lost-thousands-of-rupees-by-clicking-a-fraud-link
ಮೊಬೈಲ್​ಗೆ ಬಂದ ಲಿಂಕ್ ಒತ್ತಿ ಸಾವಿರಾರು ರೂಪಾಯಿ ಕಳೆದುಕೊಂಡ ವ್ಯಕ್ತಿ

ಹುಬ್ಬಳ್ಳಿ: ಮೊಬೈಲ್​​​​ಗೆ ಬಂದ ಲಿಂಕ್ ಓಪನ್​​ ಮಾಡಿರುವ ನಗರದ ವಿಶ್ವಾಸ್ ಹುಕ್ಕೇರಿ ಎಂಬುವರು 39,974 ರೂ ಹಣ ಕಳೆದುಕೊಂಡಿದ್ದಾರೆ.

ಇವರ ಮೊಬೈಲ್​​ಗೆ ಎಸ್‌ಬಿಐ ಬ್ಯಾಂಕ್ ಹೆಸರಲ್ಲಿ ಲಿಂಕ್ ಮೂಲಕ ಕೆವೈಸಿ ಮಾಡಿಸಿಕೊಳ್ಳುವಂತೆ ಸಂದೇಶ ಬಂದಿತ್ತು. ಈ ಸಂದೇಶವನ್ನು ನಂಬಿರುವ ಅವರು ತಮ್ಮ ಬ್ಯಾಂಕ್​ ಖಾತೆ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿದ್ದಾರೆ. ನಂತರ ಮೊಬೈಲ್​ಗೆ ಒಟಿಪಿ ಬಂದಿದೆ. ಅದನ್ನೂ ದಾಖಲಿಸಿದ್ದಾರೆ. ಆದರೆ ಒಟಿಪಿ ನೀಡುತ್ತಲೇ ಹಂತ ಹಂತವಾಗಿ ಖಾತೆಯಿಂದ 39,974 ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೈಕ್ ಮೇಲೆ ಹರಿದ ಲಾರಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.