ETV Bharat / state

ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪತ್ನಿ‌ ಕೊಲೆ ಮಾಡಿದ ಪಾಪಿ ಪತಿ - woman died in dharwad

ಗಣೇಶ ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ಈ ವಿಚಾರವಾಗಿ ಪತಿ - ಪತ್ನಿಯ ಜೊತೆ ಜಗಳ ಅತಿರೇಕಕ್ಕೆ ತಿರುಗಿ ಪತಿ ಗಣೇಶ ಸಲಿಕೆಯಿಂದ ಪತ್ನಿಯ ತಲೆಗೆ ಹೊಡೆದು ಕೊಂದಿದ್ದಾನೆ.

ಅನೈತಿಕ ಸಂಬಂಧ ಪ್ರಶ್ನೆ ಮಾಡಿದಕ್ಕೆ ಪತ್ನಿ‌ ಕೊಲೆ ಮಾಡಿದ ಪಾಪಿ ಪತಿ

author img

By

Published : Aug 13, 2021, 7:53 PM IST

ಧಾರವಾಡ: ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಪತ್ನಿಯನ್ನು ಪತಿಯೊಬ್ಬ ಕೊಲೆ ಮಾಡಿರುವ ಘಟನೆ ನಗರದ ರಾಜೀವ ಗಾಂಧಿನಗರದಲ್ಲಿ ಜರುಗಿದೆ. ಗಣೇಶ ಬಳ್ಳಾರಿ ಎಂಬುವವನೇ ತನ್ನ ಪತ್ನಿ ಶಿಲ್ಪಾಳನ್ನು ಕೊಲೆ ಮಾಡಿದ ಆರೋಪಿ.

ಗಣೇಶ ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ಈ ವಿಚಾರವಾಗಿ ಪತಿ-ಪತ್ನಿಯ ಜೊತೆ ಜಗಳ ಅತಿರೇಕಕ್ಕೆ ತಿರುಗಿ ಪತಿ ಗಣೇಶ ಸಲಿಕೆಯಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಹೆಂಡತಿ ಮೃತಪಟ್ಟಿದ್ದಾಳೆ. ಬಳಿಕ ಅಲ್ಲಿಂದ ಪತಿ ಪರಾರಿಯಾಗಿದ್ದಾನೆ.

ಇನ್ನು ಪತಿ ಗಣೇಶನನ್ನು ಬಂಧನ ಮಾಡಿರುವ ಪೊಲೀಸರು ಆತನ ಜೊತೆ ಸಂಬಂಧ ಇರಿಸಿಕೊಂಡಿದ್ದ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಶವವನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.