ಧಾರವಾಡ: ಕೋವಿಡ್ನಿಂದ ತಮ್ಮವರನ್ನು ಕಳೆದುಕೊಂಡ ದುಃಖದ ನಡುವೆಯೂ ನಗರದ ವ್ಯಕ್ತಿಯೊಬ್ಬರು ಜನರಿಗೆ ಕೈಲಾದ ಸೇವೆ ಮಾಡುತ್ತಿದ್ದಾರೆ.
ನಗರದ ರಾಘವೇಂದ್ರ ಶೆಟ್ಟರ್ ಎಂಬುವರ ಮನೆಯ ಸದಸ್ಯರು ಕೋವಿಡ್ಗೆ ಬಲಿಯಾಗಿದ್ದಾರೆ. ಹೀಗಾಗಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ರಾಘವೇಂದ್ರ ಅವರು ಪ್ರತಿನಿತ್ಯ ಹಸಿದವರಿಗೆ ಆಹಾರ, ಪಾನೀಯ ವಿತರಿಸುತ್ತಿದ್ದಾರೆ.
ಕೊರೊನಾ ವಾರಿಯರ್ಸ್ಗಳಾದ ಪೊಲೀಸರು, ಜಿಲ್ಲಾಸ್ಪತ್ರೆ ಸಿಬ್ಬಂದಿ, ಬೀದಿ ಬದಿಯಲ್ಲಿ ಹಸಿದು ಕೂತವರು, ಟ್ರಕ್ ಚಾಲಕರು ಸೇರಿದಂತೆ ಹಲವರಿಗೆ ರಾಘವೇಂದ್ರ ಅವರು ಆಹಾರ ಹಂಚುವ ಕಾರ್ಯ ಮಾಡುತ್ತಿದ್ದಾರೆ. ಬಾಳೆಹಣ್ಣು, ಕಷಾಯ, ಪಲಾವ್, ನೀರು ಸೇರಿದಂತೆ ವಿವಿಧ ಬಗೆಯ ಆಹಾರ, ಪಾನೀಯಗಳನ್ನು ಪ್ಯಾಕ್ ಮಾಡಿ ವಿತರಿಸುತ್ತಿದ್ದಾರೆ.
ಓದಿ : ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದ ಪರಿಷತ್ ಸದಸ್ಯ
ಕೋವಿಡ್ ಮೊದಲನೇ ಅಲೆಯಲ್ಲಿ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪನನ್ನು ಕಳೆದುಕೊಂಡ ರಾಘವೇಂದ್ರ ಅವರು, ಎರಡನೇ ಅಲೆಯಲ್ಲಿ ಅಣ್ಣ ಹಾಗೂ ಪತ್ನಿಯ ಚಿಕ್ಕಮ್ಮಳನ್ನು ಕಳೆದುಕೊಂಡಿದ್ದಾರೆ. ಮೃತ ಕುಟುಂಬಸ್ಥರ ಆತ್ಮಕ್ಕೆ ಶಾಂತಿ ಸಿಗಲೆಂದು ಹಸಿದವರಿಗೆ ಆಹಾರ ಹಂಚುತ್ತಿರುವುದಾಗಿ ರಾಘವೇಂದ್ರ ಅವರು ಹೇಳಿದ್ದಾರೆ.
ಕೊರೊನಾದಿಂದ ತಮ್ಮವರೆನ್ನೆಲ್ಲ ಕಳೆದುಕೊಂಡಿರುವ ರಾಘವೇಂದ್ರ ಅವರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಾನೂ ಸಂಕಷ್ಟದಲ್ಲಿದ್ದರೂ ಇನ್ನೊಬ್ಬರ ಹಸಿವು ತನಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.