ಹುಬ್ಬಳ್ಳಿ: ವಾಟ್ಸಪ್ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದೀರಾ?, ಚಾಟಿಂಗ್ ಮಾಡುವುದಕ್ಕೆ ಅಪರಿಚಿತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೀರಾ? ಹಾಗಿದ್ದರೆ ಹುಷಾರು! ಸ್ವಲ್ಪ ಯಾಮಾರಿದ್ರೂ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ. ಏನಿದು ವಂಚನೆ ಅಂತೀರಾ, ಈ ಸ್ಟೋರಿಯನ್ನು ಪೂರ್ತಿಯಾಗಿ ಓದಿ..
ವಿಡಿಯೋ ಕಾಲಿಂಗ್ ಮಾಡಿ ವಂಚನೆ:
ಹೌದು, ಬ್ಲಾಕ್‌ಮೇಲ್ ದಂಧೆಯನ್ನೇ ಉದ್ಯೋಗವಾಗಿಸಿಕೊಂಡ ಕಿರಾತಕರ ಗ್ಯಾಂಗ್ ಹುಬ್ಬಳ್ಳಿಯಲ್ಲಿ ಸಕ್ರಿಯವಾಗಿದೆ. ಇವರು ಯುವಕರನ್ನೇ ಗುರಿ ಮಾಡಿಕೊಂಡು ಹಣ ಹೊಡೆಯುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಮಾನ ಮರ್ಯಾದೆ ಹರಾಜು ಹಾಕ್ತಾರೆ ಈ ಖದೀಮರು.
ವಾಟ್ಸಪ್ ವೀಡಿಯೋ ಕಾಲ್ ಮಾಡಿ, ನಿಮ್ಮ ವೀಕ್ನೆಸ್ ತಿಳಿದುಕೊಂಡು ಹಣದ ಬೇಡಿಕೆ ಇಟ್ಟು ವಂಚನೆ ಮಾಡಲಾಗುತ್ತಿದೆ. ಮಾನ, ಮರ್ಯಾದೆಗೆ ಅಂಜುವವರನ್ನೇ ಇವರು ಗುರಿಯಾಗಿಸಿ ಅಪರಿಚಿತ ನಂಬರ್ನಿಂದ ವಾಟ್ಸಪ್ ವಿಡಿಯೋ ಕರೆ ಮಾಡ್ತಾರೆ. ಅದರಲ್ಲಿ ಯುವತಿಯೊಬ್ಬಳು ನಿಮ್ಮ ಮುಂದೆ ಸಂಪೂರ್ಣ ಬೆತ್ತಲಾಗ್ತಾಳೆ, ನಿಮ್ಮನ್ನೂ ನಗ್ನವಾಗುವಂತೆ ಪ್ರಚೋದಿಸ್ತಾಳೆ ಆ ಐನಾತಿ ಲೇಡಿ.
ಸ್ವಲ್ಪ ಯಾಮಾರಿದ್ರೂ ಸಿಡಿ ಹೊರಗಡೆ ಬರೋದು ಗ್ಯಾರಂಟಿ. ಇಂತಹದ್ದೇ ಒಂದು ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ವಿಡಿಯೋ ಕಾಲ್ ಮಾಡಿದಾಗ ಎದುರುಗಡೆ ವ್ಯಕ್ತಿಯ ಫೋಟೋವನ್ನು ಸ್ಕ್ರೀನ್ ಕ್ಯಾಪ್ಚರ್ ಮಾಡೋ ಖದೀಮರು ಬಳಿಕ ಆ ಫೋಟೋ ಅನ್ನು ಅಶ್ಲೀಲ ವಿಡಿಯೋಗೆ ಹೊಂದಾಣಿಕೆ ಮಾಡ್ತಾರೆ. ಅಲ್ಲಿಂದ ಅವರ ನಿಜವಾದ ಆಟ ಶುರು.
ಈ ರೀತಿಯ ಫೇಸ್‌ಬುಕ್ ಹಾಗೂ ವಾಟ್ಸಪ್ ಮೂಲಕ ಚಾಟಿಂಗ್ ಮಾಡಿ ಮೊದಲು 50 ಸಾವಿರ ಹಣ ಕೇಳುತ್ತಾರೆ. ಕೊಡಲ್ಲ ಅಂದರೆ ಎಡಿಟ್ ಮಾಡಿದ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಹಣ ನೀಡದಿದ್ದರೆ ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಕೂಡ ಧಮ್ಕಿ ಹಾಕ್ತಾರೆ. ಕೊನೆಗೆ 20ಸಾವಿರ ಕೊಟ್ಟರೆ ವಿಡಿಯೋ ಡಿಲೀಟ್ ಮಾಡೋ ಭರವಸೆ ನೀಡುವ ವಂಚಕರಿಗೆ ಪ್ರತಿಷ್ಠಿತ ಮನೆತನದ ಯುವಕರೇ ಟಾರ್ಗೆಟ್.
ವಾಣಿಜ್ಯ ನಗರಿಯಲ್ಲಿ ಅವ್ಯಾಹತವಾಗಿ ಇಂತಹ ಬ್ಲಾಕ್ ಮೇಲ್ ದಂಧೆ ನಡೆದಿದೆ. ಇದನ್ನೇ ಕಸುಬು ಮಾಡಿಕೊಂಡ ಖದೀಮರು ಯುವಕರನ್ನು ಆಯ್ಕೆ ಮಾಡಿಕೊಂಡು ದುಷ್ಕೃತ್ಯದಲ್ಲಿ ತೊಡಗಿದ್ದಾರೆ.