ETV Bharat / state

ಭಿಕ್ಷೆ ಬೇಡಿದ್ರೂ ಇವರು ಪ್ರಾಣಿಗಳ ಪಾಲಿನ ದಾನಶೂರ ಕರ್ಣ.. - A beggar who is feeding a dog

ಇಂದು ಸಂಡೇ ಲಾಕ್​ಡೌನ್ ಇದ್ದು ಭಿಕ್ಷುಕರು ತುತ್ತು ಅನ್ನಕ್ಕೆ ಪರದಾಡುತ್ತಿದ್ದಾರೆ. ಅಂತರದಲ್ಲಿ ಹುಬ್ಬಳ್ಳಿಯಲ್ಲಿ ಒಬ್ಬ ಭಿಕ್ಷುಕ, ಜನರು ನೀಡಿದ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಹಾಕುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ..

A beggar who is feeding a dog
ಭಿಕ್ಷೆ ಬೇಡಿದ್ರೂ ಇವರು ಪ್ರಾಣಿಗಳ ಪಾಲಿನ ದಾನಶೂರ ಕರ್ಣ
author img

By

Published : Jul 19, 2020, 4:55 PM IST

ಹುಬ್ಬಳ್ಳಿ: ಭಿಕ್ಷೆ ಬೇಡುವವರು ಎಂದರೆ ಸದಾ ಕಾಲ ಇನ್ನೊಬ್ಬರ ಮುಂದೆ ಕೈಚಾಚುತ್ತಲೇ ಬದುಕುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ, ಅಂತಹ ಭಿಕ್ಷುಕರಲ್ಲಿಯೂ ದಾನಧರ್ಮ ಮಾಡುವ ಮಹಾನ್ ಗುಣವಿದೆ ಎಂಬುದನ್ನು ಇಲ್ಲೊಬ್ಬ ಭಿಕ್ಷುಕ ತೋರಿಸಿಕೊಟ್ಟಿದ್ದಾರೆ.

ನಗರದ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಬಿಎಸ್​​ಎನ್ಎಲ್ ಕಚೇರಿ ಬಳಿ ವ್ಯಕ್ತಿಯೊಬ್ಬರು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಈಗ ವಾಣಿಜ್ಯ ನಗರಿಯಲ್ಲಿ ಲಾಕ್​ಡೌನ್ ಇದೆ. ಅದರಲ್ಲೂ ಇಂದು ಸಂಡೇ ಲಾಕ್‌ಡೌನ್ ಇದ್ದು, ಭಿಕ್ಷುಕರು ತುತ್ತು ಅನ್ನಕ್ಕೆ ಪರದಾಡುತ್ತಿದ್ದಾರೆ. ಅಂತಹುದರಲ್ಲಿ ಇವರು ಜನರು ನೀಡಿದ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಹಾಕುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.

ಭಿಕ್ಷೆ ಬೇಡಿದ್ರೂ ಇವರು ಪ್ರಾಣಿಗಳ ಪಾಲಿನ ದಾನಶೂರ ಕರ್ಣ

ಲಾಕ್​​ಡೌನ್ ಇರುವುದರಿಂದ ನಾಯಿಗಳಿಗೆ ಆಹಾರ ಸಿಗುತ್ತಿಲ್ಲ. ಹೀಗಾಗಿ ನಿಮ್ಮಂತ ದಾನಿಗಳು ನೀಡಿದ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಹಾಕುತ್ತೇನೆ ಎಂದು ನಿಷ್ಕಲ್ಮಶ ಮನಸ್ಸಿನಿಂದ ಹೇಳುತ್ತಾರೆ‌.

ತಾವಲ್ಲದೆ ತಮ್ಮ ಜೊತೆ ನಾಲ್ಕು ನಾಯಿಗಳಿಗೂ ಅನ್ನದಾನ ಮಾಡುತ್ತಿದ್ದಾರೆ. ತಮ್ಮ ಜೊತೆಗೆ ಇತರರು ಬದುಕಿಗೆ ಆಸರೆಯಾಗುತ್ತಿದ್ದಾರೆ. ಇದ್ದು ಇಲ್ಲದಂತಿರುವವರಿಗೆ ಇಂದಿನ ಸಮಾಜದಲ್ಲಿ ಇವರ ದಾನಕಾರ್ಯ ಇತರರಿಗೂ ಮಾದರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.