ETV Bharat / state

ಹುಬ್ಬಳ್ಳಿ: ಸಿದ್ಧಾರೂಢ ಸ್ವಾಮಿ ಮಠದಲ್ಲಿ ದಾಖಲೆಯ ದೇಣಿಗೆ ಸಂಗ್ರಹ - ಸಿದ್ದಾರೂಢ ಮಠ ಹುಬ್ಬಳ್ಳಿ

ಸಿದ್ಧಾರೂಢ ಸ್ವಾಮಿ ಮಠದಲ್ಲಿ ಕಳೆದ 20 ದಿನಗಳಲ್ಲಿ ದಾಖಲೆಯ ದೇಣಿಗೆ ಸಂಗ್ರಹವಾಗಿದೆ. ಒಟ್ಟು 39.24 ಲಕ್ಷ ರೂ. ಕಾಣಿಕೆ ಮತ್ತು ಸುಮಾರು 64 ಸಾವಿರ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

39.24 lakhs  donations collected at Siddhartha Swamy Math
ಸಿದ್ಧಾರೂಢ ಸ್ವಾಮಿ ಮಠದಲ್ಲಿ ದಾಖಲೆಯ 39.24 ಲಕ್ಷ ರೂ . ದೇಣಿಗೆ ಸಂಗ್ರಹ
author img

By

Published : Mar 10, 2022, 12:49 PM IST

ಹುಬ್ಬಳ್ಳಿ : ಇಲ್ಲಿನ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ಫೆ.16 ರಿಂದ ಮಾ. 9 ರವರೆಗೆ ಒಟ್ಟು 39.24 ಲಕ್ಷ ರೂ. ಹಾಗೂ 64 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿದೆ ಎಂದು ಹೇಳಿದೆ.

ಸಿದ್ಧಾರೂಢ ಸ್ವಾಮಿಗಳ ಮಠದ ಕಾಣಿಕೆ ಹುಂಡಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮ್ಮುಖದಲ್ಲಿ ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ಜೊತೆಗೆ ಎಣಿಕೆ ಮಾಡಲಾಯಿತು. ಒಟ್ಟು 39,24,396 ರೂ ಕಾಣಿಕೆ ಮತ್ತು ಹಾಗೂ 64,404 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿದೆ ಎಂದು ಹೇಳಿದ್ದಾರೆ. ಕಳೆದ 20 ದಿನಗಳಲ್ಲಿ ದಾಖಲೆಯ ಕಾಣಿಕೆ ಸಂಗ್ರಹವಾಗಿರುವುದಾಗಿ ಹೇಳಲಾಗಿದೆ.

ಕಾಣಿಕೆ ಹುಂಡಿಯನ್ನು ಎಣಿಸುವ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ಚೇರ್ಮನ್‌ ಡಿ.ಡಿ ಮಾಳಗಿ, ವೈಸ್ ಚೇರ್ಮನ್ ಡಾ. ಗೋವಿಂದ ಜಿ. ಮಣ್ಣೂರ, ಗೌರವ ಕಾರ್ಯದರ್ಶಿ ಜಗದೀಶ ಲ.ಮಗಜಿಕೊಂಡಿ, ಧರ್ಮದರ್ಶಿಗಳು, ಶಿರಸ್ತೆದಾರರು, ಶ್ರೀಮಠದ ಮ್ಯಾನೇಜರ್ ಈರಣ್ಣ ಮತ್ತಿತರರು ಉಪಸ್ಥಿತರಿದ್ದರು.

ಓದಿ :Manipur Result: 18 ಸಾವಿರ ಮತಗಳ ಅಂತರದಿಂದ ಸಿಎಂ ಬಿರೇನ್ ಸಿಂಗ್ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.