ಧಾರವಾಡ : ದಿನೇದಿನೆ ಕೊರೊನಾ ಏರುಗತಿಯಲ್ಲಿದೆ. ಒಂದೇ ದಿನ 34 ಜನರಿಗೆ ಸೋಂಕು ತಗುಲಿದೆ.
ಜಿಲ್ಲೆಯ ಗ್ರಾಮವೊಂದರಲ್ಲಿ 23 ಮಂದಿಗೆ ಕೊರೊನಾ ಕಾಣಿಸಿದೆ. ಪಿ-6222ನಿಂದ ಸೋಂಕು ಹರಡಿದೆ. ಮಗಳನ್ನು ಕರೆತರಲು ದೆಹಲಿಗೆ ಹೋಗಿದ್ದ ಈ ವ್ಯಕ್ತಿ ಮನೆಯ ನಾಲ್ವರು ಸದಸ್ಯರಿಗೆ ವೈರಸ್ ಹರಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಪಿ-6222ನಿಂದಲೇ ಗ್ರಾಮದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇದಲ್ಲದೇ ಪಿ-6255ನಿಂದ ಮೂವರಿಗೆ ಸೋಂಕು ಕಾಣಿಸಿದೆ. ಪಿ-6269ನಿಂದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಹಿಂತಿರುಗಿದ ನಾಲ್ವರಿಗೆ, ಜಮ್ಮು-ಕಾಶ್ಮೀರ, ತೆಲಂಗಾಣ, ರಾಜಸ್ಥಾನದಿಂದ ಬಂದ ತಲಾ ಒಬ್ಬರಿಗೆ ಸೋಂಕು ಕಾಣಿಸಿದೆ. ಇದು ಜಿಲ್ಲೆಯ ಜನರ ಆತಂಕ ಹೆಚ್ಚಿಸಿದೆ.