ETV Bharat / state

ಫೆ.27ರಂದು ಧಾರವಾಡ ಕೃಷಿ ವಿವಿಯ 33ನೇ ಘಟಿಕೋತ್ಸವ - 33rd Anniversary of Dharwad Agriculture

ಕೃಷಿ ವಿವಿ ಸಹಕುಲಾಧಿಪತಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಪದವಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭಾರತ ಸರ್ಕಾರದ ವಿಜ್ಞಾನ-ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಡಾ. ಅಶುತೋಷ ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ಡಾ. ಮಹಾದೇವ ಚೆಟ್ಟಿ ಹೇಳಿದರು.

ಕುಲಪತಿ ಚೆಟ್ಟಿ
ಕುಲಪತಿ ಚೆಟ್ಟಿ
author img

By

Published : Feb 25, 2021, 4:10 PM IST

ಧಾರವಾಡ: ಕೃಷಿ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಫೆ.27ರಂದು ಬೆಳಗ್ಗೆ 11ಕ್ಕೆ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಲಿದೆ ಎಂದು ಕುಲಪತಿ ಡಾ. ಮಹಾದೇವ ಚೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಕೃಷಿ ವಿವಿ ಸಹಕುಲಾಧಿಪತಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಪದವಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭಾರತ ಸರ್ಕಾರದ ವಿಜ್ಞಾನ-ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಡಾ. ಅಶುತೋಷ ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಚೆಟ್ಟಿ

ಘಟಿಕೋತ್ಸವದಲ್ಲಿ 786 ಹಾಜರಾತಿ, 104 ಗೈರು ಹಾಜರಾತಿ ಸೇರಿ ಒಟ್ಟು 890 ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಲಿದ್ದು, ಸ್ನಾತಕ ವಿಷಯದಲ್ಲಿ ಕೃಷಿ-434, ಅರಣ್ಯ-54, ಮಾರುಕಟ್ಟೆ-ಸಹಕಾರ-67, ಗೃಹ ವಿಜ್ಞಾನ-40, ಬಿಟೆಕ್ (ಆಹಾರ ತಾಂತ್ರಿಕತೆ)-21, ಬಿಎಸ್​​ಸಿ (ತೋಟಗಾರಿಕೆ)-2 ಹೀಗೆ ಒಟ್ಟು 618 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.

ಸ್ನಾತಕೋತ್ತರ ಪದವಿಗಳಲ್ಲಿ ಕೃಷಿ 202, ಅರಣ್ಯ 3, ಗೃಹ ವಿಜ್ಞಾನ 15, ಎಂಬಿಎ (ಕೃಷಿ ವ್ಯವಹಾರ-ನಿರ್ವಹಣೆ) 9, ಆಹಾರ ತಾಂತ್ರಿಕತೆ 3, ಹೀಗೆ ಒಟ್ಟು 232‌ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು, ಈ ಪೈಕಿ 197 ಹಾಜರಾತಿಯಲ್ಲಿ ಪದವಿ ಸ್ವೀಕರಿಸಲಿದ್ದಾರೆ ಎಂದರು.

ವಿವಿಧ ವಿಷಯಗಳಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ 40 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಿದ್ದು, 38 ವಿದ್ಯಾರ್ಥಿಗಳು ಹಾಜರಾತಿಯಲ್ಲಿ ಪದವಿ ಸ್ವೀಕರಿಸಲಿದ್ದಾರೆ. ಘಟಿಕೋತ್ಸವದಲ್ಲಿ 38 ಚಿನ್ನದ ಪದಕಗಳು ಹಾಗೂ 10 ನಗದು ಬಹುಮಾನ ಸಹ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.