ETV Bharat / state

ಧಾರವಾಡದ SDM ಮೆಡಿಕಲ್ ಕಾಲೇಜಿನ 306 ಸೋಂಕಿತರು ಡಿಸ್ಚಾರ್ಜ್

author img

By

Published : Dec 13, 2021, 8:09 PM IST

ಕಳೆದ ನವೆಂಬರ್ 24 ರಿಂದ 26 ರ‌ವರೆಗೆ ಕಾಣಿಸಿಕೊಂಡಿದ್ದ 306 ಪ್ರಕರಣದಲ್ಲಿ ಎಲ್ಲರೂ ಗುಣಮುಖರಾಗಿದ್ದಾರೆ. ಕೆಲವರು ಈಗಾಗಲೇ ತಮ್ಮ ಊರಿಗೆ ಕೂಡಾ ಹೋಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಧಾರವಾಡದ SDM ಮೆಡಿಕಲ್ ಕಾಲೇಜ್​
ಧಾರವಾಡದ SDM ಮೆಡಿಕಲ್ ಕಾಲೇಜ್​

ಧಾರವಾಡ : ಎಸ್​​​ಡಿಎಂ ಮೆಡಿಕಲ್ ಕಾಲೇಜಿನಲ್ಲಿ 306 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಎಲ್ಲರೂ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

SDM ಮೆಡಿಕಲ್ ಕಾಲೇಜಿನ 306 ಸೋಂಕಿತರು ಡಿಸ್ಚಾರ್ಜ್

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ನವೆಂಬರ್ 24 ರಿಂದ 26 ರ‌ವರೆಗೆ ಕಾಣಿಸಿಕೊಂಡಿದ್ದ 306 ಪ್ರಕರಣದಲ್ಲಿ ಎಲ್ಲರೂ ಗುಣಮುಖರಾಗಿದ್ದಾರೆ. ಕೆಲವರು ಈಗಾಗಲೇ ತಮ್ಮ ಊರಿಗೆ ಕೂಡಾ ಹೋಗಿದ್ದಾರೆ. ಜಿಲ್ಲೆಯಲ್ಲಿ ಕೊವೀಡ್ ಪ್ರಕರಣ ಕಡಿಮೆಯಾಗಿವೆ. ಸದ್ಯ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ 57 ಇವೆ, ಇಂದು 2 ಪ್ರಕರಣಗಳು ಪತ್ತೆಯಾಗಿವೆ. ಹೊರ ದೇಶದಿಂದ ಬಂದಿದ್ದ ಒಬ್ಬರಿಗೆ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

ಅವರನ್ನ ಹೊಂ ಐಸೊಲೆಷನ್ ನಲ್ಲಿ ಇರಿಸಲಾಗಿದ್ದು, ಆರೋಗ್ಯವಾಗಿದ್ದಾರೆ. ಗುರುತಿಸಿದ 14 ದೇಶದಿಂದ ಇವರು ಬಂದಿಲ್ಲ. ಈಗಾಗಲೇ ಅವರ ಮನೆಗೆ ಆರೋಗ್ಯ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಅವರಿಗೆ ಯಾವುದೇ ರೋಗ ಗುಣಲಕ್ಷಣ‌ ಇಲ್ಲ. ಜಿಲ್ಲೆಯಲ್ಲಿ ನಿತ್ಯ 4 ಸಾವಿರ ಟೆಸ್ಟ್ ನಡೆದಿವೆ ಎಂದು ಮಾಹಿತಿ‌ ನೀಡಿದರು.

ಇದನ್ನೂ ಓದಿ : ಧಾರವಾಡದ SDM ಮೆಡಿಕಲ್ ಕಾಲೇಜಿನ 116 ವಿದ್ಯಾರ್ಥಿಗಳಿಗೆ ಕೊರೊನಾ: ಒಟ್ಟು ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.