ಧಾರವಾಡ: ಜಿಲ್ಲೆಯಲ್ಲಿ ಏಪ್ರಿಲ್ 29ರವರೆಗೆ ದಾಖಲಾದ 440 ಶಂಕಿತರ ಪೈಕಿ 233 ವರದಿ ನೆಗೆಟಿವ್ ಬಂದಿದ್ದು, 207 ಶಂಕಿತರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
![corona tests report negative in dharwad](https://etvbharatimages.akamaized.net/etvbharat/prod-images/7007454_1110_7007454_1588257302320.png)
ಇಂದು 24 ಗಂಟೆಗಳಲ್ಲಿ 186 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಇವುಗಳನ್ನು ಒಳಗೊಂಡಂತೆ ಒಟ್ಟು 393 ಶಂಕಿತರ ವರದಿ ಬಾಕಿ ಇದೆ. 8 ಜನರಿಗೆ ಆಸ್ಪತ್ರೆಯ ಐಸೊಲೇಷನ್ನಲ್ಲಿ ಇರಿಸಲಾಗಿದೆ.
![corona tests report negative in dharwad](https://etvbharatimages.akamaized.net/etvbharat/prod-images/kn-dwd-4-corona-health-bulletine-av-ka10001_30042020194409_3004f_1588256049_143.jpg)
ಇಲ್ಲಿಯವರೆಗೆ ಒಟ್ಟು 3180 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ಅದರಲ್ಲಿ 2,386 ಜನರಿಗೆ 14 ದಿನಗಳ ಐಸೊಲೇಷನ್ ಇದ್ದು, 83 ಜನರಿಂದ 14 ದಿನಗಳ ಐಸೊಲೇಷನ್ ಹಾಗೂ 703 ಜನರ 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಂಡಿದೆ.