ETV Bharat / state

ಕೊರೊನಾ ಜಯಿಸಿದ ಇಡೀ ಕುಟುಂಬ.. ನಾಲ್ಕು ಕಂದಮ್ಮ ಸೇರಿ 16 ಮಂದಿ ಗುಣಮುಖ.. - ಕೊರೊನಾ ಗೆದ್ದು ಬಂದ ಕುಟುಂಬ

ಸೋಂಕಿನ ಲಕ್ಷಣಗಳು ಕಾಣಿಸಿದಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೆ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿದೆವು..

ಕೊರೊನಾ ಗೆದ್ದು ಬಂದ ಕುಟುಂಬ
ಕೊರೊನಾ ಗೆದ್ದು ಬಂದ ಕುಟುಂಬ
author img

By

Published : May 21, 2021, 8:23 PM IST

ಹುಬ್ಬಳ್ಳಿ : ರಾಜ್ಯದಲ್ಲಿ ಕೊರೊನಾ 2ನೇ ಅಲೆ​​​ಗೆ ಸಾಕಷ್ಟು ಜನರು ಬಲಿಯಾಗಿದ್ದಾರೆ. ಇದರ ನಡುವೆಯೇ ವೈರಸ್ ವಿರುದ್ಧ ಹೋರಾಡಿ ಇಡೀ ಕುಟುಂಬವೊಂದು ಹೊರ ಬಂದಿದೆ.

ಹುಬ್ಬಳ್ಳಿ ತಾಲೂಕಿನ ಒಂದೇ ಕುಟುಂಬದ 16 ಮಂದಿ ಕೊರೊನಾ ಗೆದ್ದಿದ್ದಾರೆ. ಈ ಮೂಲಕ ಸೋಂಕಿಗೆ ತುತ್ತಾಗಿ ಆತಂಕಕ್ಕೊಳಗಾಗಿರುವವರಿಗೆ ಹೊಸ ಆಶಾಭಾವನೆ ಮೂಡಿಸಿದ್ದಾರೆ.

ಸುಳ್ಳ ಗ್ರಾಮದ ಶಿವಳ್ಳಿಮಠ ಕುಟುಂಬದವರಿಗೆ ಮೇ 3 ರಂದು 16 ಸದಸ್ಯರಿಗೂ ಕೊರೊನಾ ಸೋಂಕು ತಗುಲಿತ್ತು. ಎಲ್ಲರೂ ಹೋಮ್ ಐಸೋಲೇಷನ್ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದರಲ್ಲಿ 3 ವರ್ಷದ ಒಳಗಿನ 4 ಮಕ್ಕಳು ಸಹ ಗುಣಮುಖರಾಗಿದ್ದಾರೆ.

ಕಳೆದ ತಿಂಗಳು 29ರಂದು ಸೋಂಕಿನ ಲಕ್ಷಣಗಳು ಕಾಣಿಸಿದಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೆ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿದೆವು ಎಂದು ಮನೆಯ ಮುಖ್ಯಸ್ಥ ಮಲ್ಲಯ್ಯ ಶಿವಳ್ಳಿಮಠ ತಿಳಿಸಿದ್ದಾರೆ.

ಒಂದೇ ಕುಟುಂಬದ ರಾಜು(34), ಶ್ರೇಯಾ (10ತಿಂಗಳು), ಲಕ್ಷ್ಮಿ(25), ವೈಭವಿ(1), ಶಶಿಕಲಾ(24), ಸಮರ್ಥ (2), ಸಹನಾ(16),ವೈಷ್ಣವಿ(2),ಗಿರಿಜಮ್ಮ(60),ಶರಣಯ್ಯಾ(9), ಮಲ್ಲಯ್ಯ (63),ಮಹಾಂತಯ್ಯ(60), ಸಿದ್ದರಾಮಯ್ಯ(59) ಮಲ್ಲಿಕಾರ್ಜುನ (25), ಮಲ್ಲಿಕಾರ್ಜುನಯ್ಯಾ(28), ಮೃತ್ಯುಂಜಯ(27) ಎಂಬುವರು ಕೊರೊನಾದಿಂದ ಗುಣಮುಖರಾದವರಾಗಿದ್ದಾರೆ.

ಇದನ್ನೂ ಓದಿ: ಬ್ಲ್ಯಾಕ್ ಫಂಗಸ್​​​ಗೆ ಬೇಕಾದ ಔಷಧ ಕಳುಹಿಸಲು ಕೇಂದ್ರಕ್ಕೆ ಮನವಿ : ಸಚಿವ ಆರ್. ಅಶೋಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.