ಧಾರವಾಡ: ಅಂಕಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮತ್ತೊಂದು ಮಹಾ ಯಡವಟ್ಟು ಮಾಡಿಕೊಂಡಿದೆ. ವಾಣಿಜ್ಯ ವಿಭಾಗದ ಅಂತಿಮ ವರ್ಷದ ಪರೀಕ್ಷಾ ಕನ್ನಡ ವಿಷಯದ ಅಂಕಪಟ್ಟಿಯಲ್ಲಿ ಕವಿವಿ ತಪ್ಪು ಮಾಡಿ ಸಿಕ್ಕಿಕೊಂಡಿದೆ.
ಕಡ್ಡಾಯ ಕನ್ನಡ ವಿಷಯದ ಅಂಕದ ವಿಷಯದಲ್ಲಿ ಯಡವಟ್ಟಾಗಿದ್ದು, ಕಡ್ಡಾಯ ಕನ್ನಡ ವಿಷಯದಲ್ಲಿ ಬಂದ ಅಂಕಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಸೇರ್ಪಡೆ ಮಾಡಿದೆ. ಮೊದಲು ಕನ್ನಡ ಕಲಿ ಎಂಬ ವಿಷಯ ಇತ್ತು. ಈಗ ಕಡ್ಡಾಯ ಕನ್ನಡ ಎಂದು ಮಾಡಲಾಗಿದೆ. ಕಡ್ಡಾಯ ಕನ್ನಡ ಕೋರ್ಸ್ ಸಬ್ಜೆಕ್ಟ್ ಅಲ್ಲದೇ ಇದ್ದರೂ ಆ ಅಂಕಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಸೇರ್ಪಡೆ ಮಾಡಿ ಕವಿವಿ ಎಡವಟ್ಟು ಮಾಡಿಕೊಂಡಿದೆ.
ಇದೇ ರೀತಿ ಒಟ್ಟು 15 ಸಾವಿರ ಅಂಕಪಟ್ಟಿ ಸಿದ್ಧಪಡಿಸಿರುವ ಕವಿವಿಗೆ ತಪ್ಪು ಗಮನಕ್ಕೆ ಬಂದ ನಂತರ ಅಂಕಪಟ್ಟಿಯ ಮರು ಮುದ್ರಣಕ್ಕೆ ಮುಂದಾಗಿದೆ.. ಈ ಎಡವಟ್ಟಿನಿಂದ ಪಾಸಿಂಗ್ ಸರ್ಟಿಫಿಕೇಟ್‌ನಲ್ಲೂ ವ್ಯತ್ಯಾಸ ಉಂಟಾಗಿದೆ.. ಪಾಸಿಂಗ್ ಸರ್ಟಿಫಿಕೆಟ್‌ನಲ್ಲಿ ಶೇ.5 ರಷ್ಟು ವ್ಯತ್ಯಾಸ ಕಂಡು ಬಂದಿದ್ದು, ಈ ತಪ್ಪು ಮಾಡಿದವರ ಮೇಲೆ ಸೂಕ್ತ ಕ್ರಮಕ್ಕೆ ಕವಿವಿ ಮುಂದಾಗಿದೆ.
ಇದನ್ನೂಓದಿ:ಪ್ರವೇಶ ದಾಖಲೆ ಇಲ್ಲದೇ ಎಂಬಿಬಿಎಸ್ ತರಗತಿಗೆ ಹಾಜರಾದ ವಿದ್ಯಾರ್ಥಿ: ತನಿಖೆಗೆ ಮುಂದಾದ ಕೇರಳ ಪೊಲೀಸರು