ETV Bharat / state

ದಾವಣಗೆರೆ: ಹೊಟ್ಟೆನೋವು ತಾಳಲಾರದೆ ಔಷಧಿ ಬದಲು ಕ್ರಿಮಿನಾಶಕ ಸೇವಿಸಿದ ಯುವಕ ಸಾವು - ಕೀಟನಾಶಕ

Davanagere: ಹೊಟ್ಟೆ ನೋವು ತಾಳಲಾರದೆ ಔಷಧಿ ಸೇವಿಸುವ ಬದಲು ಕೀಟನಾಶಕ ಸೇವಿಸಿ ಯುವಕ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

youth-died-after-consuming-pesticide-instead-of-medicine-in-davanagere
ಹೊಟ್ಟೆನೋವು ತಾಳಲಾರದೆ ಔಷಧಿ ಬದಲು ಕ್ರಿಮಿನಾಶಕ ಸೇವಿಸಿದ ಯುವಕ ಸಾವು
author img

By

Published : Aug 13, 2023, 8:16 PM IST

ದಾವಣಗೆರೆ : ಹೊಟ್ಟೆನೋವು ತಾಳಲಾರದೆ ಔಷಧಿ ಸೇವಿಸುವ ಬದಲು ಕೀಟನಾಶಕ ಸೇವಿಸಿ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿಯ ವೆಂಕಟೇಶ್ವರ ಕ್ಯಾಂಪ್​ನಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ವಿಜಯ್ ಕೃಷ್ಣ (24) ಎಂದು ಗುರುತಿಸಲಾಗಿದೆ.

ವಿಜಯ್​ ದಾವಣಗೆರೆ ವಿಶ್ವವಿದ್ಯಾನಿಲಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಿಜಯ್ ಕೃಷ್ಣ ಹಲವು ವೈದ್ಯರನ್ನು ಭೇಟಿ ಚಿಕಿತ್ಸೆ ಪಡೆದಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಆಗಸ್ಟ್​​ 10ರಂದು ಔಷಧಿ ಸೇವಿಸುವ ಬದಲು ಮನೆಯಲ್ಲಿದ್ದ ಕೀಟನಾಶಕ ಕುಡಿದಿದ್ದು, ಮನೆಯಲ್ಲಿ ಬಿದ್ದು ಒದ್ದಾಡುತ್ತಿದ್ದರು.

ಕೂಡಲೇ ತಂದೆ ತ್ಯಾವಣಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಂತೇಬೆನ್ನೂರು ಪೊಲೀಸರು​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯುತ್​ ತಗುಲಿ ಯುವಕ ಸಾವು : ಮೊಬೈಲ್ ಚಾರ್ಜ್ ಹಾಕಲು ಹೋದ ಯುವಕ ವಿದ್ಯುತ್ ತಗುಲಿ ಸಾವನ್ನಪ್ಪಿದ್ದ ಘಟನೆ ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿತ್ತು. ಮೃತ ಯುವಕನನ್ನು ನಿಪ್ಪಾಣಿ ತಾಲೂಕಿನ ಶಿರಪ್ಪೆವಾಡಿ ಗ್ರಾಮದ ಆಕಾಶ ಸಂಕಪಾಳ (27) ಎಂದು ಗುರುತಿಸಲಾಗಿತ್ತು.

ಮುಂಜಾನೆ ಎಂಟು ಗಂಟೆ ಸುಮಾರಿಗೆ ಮನೆಯಲ್ಲಿ ಮೊಬೈಲ್ ಚಾರ್ಚ್ ಹಾಕುವುದಕ್ಕೆ ಯುವಕ ಮುಂದಾಗಿದ್ದನು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಕೈಗೆ ತಗುಲಿ ಸಾವು ಸಂಭವಿಸಿದೆ ಎಂದು ಮೃತ ಯುವಕನ ತಂದೆ ನಿಪ್ಪಾಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ನಿಪ್ಪಾಣಿ ಪೊಲೀಸರು ಪರಿಶೀಲನೆ ನಡೆಸಿದ್ದರು. ನಿಪ್ಪಾಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ.ಸಂಜೀವ್​ ಪಾಟೀಲ್ ಮಾಹಿತಿ ನೀಡಿದ್ದರು.

ಆಯತಪ್ಪಿ ಬಿದ್ದು ಯುವಕ ಸಾವು : ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವ ಆಯತಪ್ಪಿ ಬಿದ್ದು ಮೃತಪಟ್ಟಿದ್ದ ಘಟನೆ ಶಿವಮೊಗ್ಗದ ಹೊಸನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಮೃತ ಯುವಕನನ್ನು ಹೊಸನಗರ ದ್ಯಾವರ್ಸದ ನಿವಾಸಿ ರಾಘು(25) ಎಂದು ಗುರುತಿಸಲಾಗಿತ್ತು. ಇಲ್ಲಿನ ಕಲ್ಲುಹಳ್ಳ ಸೇತುವೆ ಬಳಿ ನಡೆದುಕೊಂಡು ಹೋಗುವಾಗ ಯುವಕ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ಎಂದು ಹೇಳಲಾಗಿತ್ತು. ಹೊಸನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : Amruthahalli Murder: ಅಮೃತಹಳ್ಳಿ ಜೋಡಿ ಕೊಲೆ ಪ್ರಕರಣ: 30 ದಿನದಲ್ಲಿ ತನಿಖೆ ನಡೆಸಿ ಚಾರ್ಜ್​ಶೀಟ್​ ಸಲ್ಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.