ETV Bharat / state

ದಾವಣಗೆರೆ: ಪ್ರೀತಿ ನಿರಾಕರಿಸಿದ ಯುವತಿಯನ್ನ ಹಾಡಹಗಲೇ ಕೊಂದ ಪಾಗಲ್​ಪ್ರೇಮಿ - Young woman murder about love

ದಾವಣಗೆರೆ ನಗರದಲ್ಲಿ ಯುವತಿಯನ್ನು ಕೊಲೆ ಮಾಡಲಾಗಿದೆ. ಯಾವ ಕಾರಣಕ್ಕಾಗಿ, ಯಾರು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಣೆ ನಡೆಸುತ್ತಿದ್ದಾರೆ.

young-woman-murdered-in-davangere
ದಾವಣಗೆರೆಯಲ್ಲಿ ಹಾಡಹಗಲೇ ಯುವತಿಯ ಕೊಲೆ
author img

By

Published : Dec 22, 2022, 1:00 PM IST

Updated : Dec 22, 2022, 1:47 PM IST

ದಾವಣಗೆರೆ: ತಾನು ಪ್ರೀತಿಸುತ್ತಿದ್ದ ಯುವತಿಗೆ ಬೇರೊಬ್ಬನ ಜೊತೆ ವಿವಾಹ ನಿಶ್ಚಯವಾದ ಕಾರಣ ಕುಪಿತನಾದ ಪ್ರೇಮಿ ಆಕೆಯನ್ನು ಕೊಲೆ ಮಾಡಿದ ಘಟನೆ ನಗರದ ಪಿಜೆ ಬಡಾವಣೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ವಿನೋಭನಗರದ ನಿವಾಸಿ ಚಾಂದ್ ಸುಲ್ತಾನಾ (24) ಕೊಲೆಯಾದ ಯುವತಿ. ಚಾಂದ್ ಪೀರ್ ಆಲಿಯಾಸ್ ಸಾದತ್ ಕೊಲೆ ಮಾಡಿದವ.

ಆರೋಪಿ ಸಾದತ್ ಹರಿಹರ ನಗರದ ನಿವಾಸಿಯಾಗಿದ್ದಾನೆ. ಯುವತಿ ಚಾಂದ್​ ಸುಲ್ತಾನಾಳನ್ನು ಯುವಕ ಪ್ರೀತಿಸುತ್ತಿದ್ದ, ಅಲ್ಲದೇ ಮದುವೆಯಾಗುವ ಬಯಕೆ ಹೊಂದಿದ್ದ. ತನ್ನ ಪ್ರೀತಿಯನ್ನು ಆಕೆಗೆ ತಿಳಿಸಿದ್ದ. ಆದರೆ, ಇದನ್ನು ಸುಲ್ತಾನಾ ನಿರಾಕರಿಸಿದ್ದಳು. ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ ಎಂದು ಹೇಳಲಾಗಿದೆ.

ಇಷ್ಟರಲ್ಲಾಗಲೇ ಯುವತಿಗೆ ಬೇರೊಬ್ಬನ ಜೊತೆಗೆ ವಿವಾಹ ಕುದುರಿತ್ತು. ಇದು ಸಾದತ್​ ಕೋಪಕ್ಕೆ ಕಾರಣವಾಗಿತ್ತು. ತನ್ನಿಂದ ಸುಲ್ತಾನಾ ದೂರವಾಗುತ್ತಾಳೆ ಎಂಬ ಹತಾಶೆಯಿಂದ ಸಾದತ್​ ಇಂದು ಬೆಳಗ್ಗೆ ಸುಲ್ತಾನಾ ಬೈಕ್​ ಮೇಲೆ ಹೋಗುತ್ತಿದ್ದಾಗ ಕೊಲೆ ಮಾಡಿದ್ದಾನೆ.

ಯುವತಿ ಕೊಂದು ವಿಷ ಕುಡಿದ ಆರೋಪಿ: ಯುವತಿ ಚಾಂದ್ ಸುಲ್ತಾನಾಳನ್ನು ಕೊಲೆ ಮಾಡಿದ ಆರೋಪಿ ಸಾದತ್ ಬಳಿಕ ವಿಷ ಸೇವಿಸಿದ್ದಾನೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಆರೋಪಿಯನ್ನು ಆಸ್ಪತ್ರೆ ಸೇರಿಸಲಾಗಿದೆ. ಸ್ಥಳಕ್ಕೆ ದಾವಣಗೆರೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿದ್ದು, ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಓದಿ: ಬಾವಿಯಲ್ಲಿ ಕಾದಿದ್ದ ಜವರಾಯ.. ಮೋಟಾರ್​ ಅಳವಡಿಸುವಾಗ ವಿದ್ಯುತ್​ ಪ್ರವಹಿಸಿ ಮೂವರು ದುರ್ಮರಣ

Last Updated : Dec 22, 2022, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.