ETV Bharat / state

ಉಕ್ಕಡಗಾತ್ರಿ ದೇವಾಲಯಕ್ಕೆ ತೆರಳಿದ್ದ ಭಕ್ತ: ಸ್ನಾನ ಮಾಡಲು ನದಿಗಿಳಿದು ಕೊಚ್ಚಿ ಹೋದ ಯುವಕ - ದಾವಣಗೆರೆಯಲ್ಲಿ ಭಾರಿ ಮಳೆ

ತುಂಗಾಭದ್ರಾ ನದಿ ಭೋರ್ಗರೆಯುತ್ತಿದೆ. ಇದರಿಂದ ಕಳೆದ ಒಂದು ವಾರದಿಂದ ನದಿಪಾತ್ರಕ್ಕೆ‌ ಯಾರು ಕೂಡ ತೆರಳಕೂಡದೆಂದು ಸೂಚನೆ ನೀಡಲಾಗಿದೆ. ಅದ್ರೂ ಕೇಳದ ವ್ಯಕ್ತಿಯೊಬ್ಬ ನದಿ ಪಾತ್ರಕ್ಕೆ ತೆರಳಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

Young Man Washed Away In Tungabhadra River

author img

By

Published : Jul 16, 2022, 7:14 PM IST

Updated : Jul 16, 2022, 8:54 PM IST

ದಾವಣಗೆರೆ: ವ್ಯಕ್ಯಿಯೊಬ್ಬ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕ್ಷೇತ್ರದ ಬಳಿ ನಡೆದಿದೆ. ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ತಾಂಡದ ಪರಮೇಶ್ ನಾಯ್ಕ್(35) ನೀರಿನಲ್ಲಿ ಕೊಚ್ಚಿಹೋದ ಯುವಕ ಎಂದು ತಿಳಿದುಬಂದಿದೆ.

Young Man Washed Away In Tungabhadra River
ಮುಳುಗು ತಜ್ಞರಿಂದ ಪರಮೇಶ್​ಗಾಗಿ ಹುಡುಕಾಟ

ಚನ್ನಗಿರಿಯ ರಾಜಗೊಂಡ‌ನಹಳ್ಳಿ ತಾಂಡಾದಿಂದ ಯುವಕ ಪರಮೇಶ್ ನಾಯ್ಕ್ ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಾಲಯಕ್ಕೆ ಆಗಮಿಸಿದ್ದರು. ನದಿ ಪಾತ್ರಕ್ಕೆ ಯಾರು ಹೋಗಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದರೂ ಯುವಕ ಸ್ನಾನಕ್ಕೆ ತೆರಳಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ‌.

ಸ್ನಾನ ಮಾಡಲು ನದಿಗಿಳಿದು ಕೊಚ್ಚಿ ಹೋದ ಯುವಕ

ಪರಮೇಶ್ ತನ್ನ ಕುಟುಂಬ ಸಮೇತರಾಗಿ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಬಂದಿದ್ದರು. ನದಿಯಲ್ಲಿ ಇಳಿದು ಸ್ನಾನಕ್ಕೆ ತೆರಳಿದಾಗ ಈ ಅವಘಡ ನಡೆದಿದೆ. ಇನ್ನು ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಮಲೆಬೆನ್ನೂರು ಠಾಣೆ ಪೊಲೀಸರು ಹಾಗೂ ಹರಿಹರ ತಾಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳುಗು ತಜ್ಞರಿಂದ ಪರಮೇಶ್​ಗಾಗಿ ಹುಡುಕಾಟ ನಡೆಸಲಾಗಿದೆ. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾವೇರಿ: ನದಿ ಮಧ್ಯೆ ಸಿಲುಕಿದ್ದ ಕುದುರೆ... ದಡ ಸೇರಿಸಿದ ಅಗ್ನಿ ಶಾಮಕ ಸಿಬ್ಬಂದಿ

Last Updated : Jul 16, 2022, 8:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.