ದಾವಣಗೆರೆ: ಗುಂಪು ಕಟ್ಟಿಕೊಂಡು ಹೋಗುತ್ತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿಗೆ ನಿನ್ನೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತರಾಟೆ ತೆಗೆದುಕೊಂಡಿದ್ದರು. ಇಂದು ಡಿಸಿಗೆ ರೇಣುಕಾಚಾರ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಕೊರೊನಾ ತಡೆಯುವ ಸಂಬಂಧ ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಡಿಸಿಗೆ ರೇಣುಕಾಚಾರ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಚಿವ ಈಶ್ವರಪ್ಪ ಮುಂದೆಯೇ ನಿನ್ನೆಯ ವಿಷಯ ಪ್ರಸ್ತಾಪಿಸಿದ ರೇಣುಕಾಚಾರ್ಯ, ಡಿಸಿ ಮಹಾಂತೇಶ್ ಬೀಳಗಿ ಅವರನ್ನು ತರಾಟೆಗೆ ತೆಗೆದುಕೊಂಡರು. "ನಿನ್ನೆ ನಾನು ಜನರಲ್ಲಿ ಜಾಗೃತಿ ಮೂಡಿಸಲು ಬಂದಿದ್ದೆ. ನೀವು ನಿಮ್ಮ ಕೆಲಸ ಮಾಡುತ್ತೀರಿ, ನಾವು ನಮ್ಮ ಕೆಲಸ ಮಾಡುತ್ತೇವೆ. ನಮಗೂ ಜವಾಬ್ದಾರಿ ಇದೆ. ಮಾಧ್ಯಮದವರ ಮುಂದೆ ಹಾಗೆ ಮಾತಾಡಿದ್ರಿ, ಅದೆಲ್ಲ ಸುದ್ದಿ ಆಯಿತು' ಎಂದು ಬೇಸರದಲ್ಲಿ ಹೇಳಿದ್ರು.
ನಿನ್ನೆ ದಾವಣಗೆರೆಯಲ್ಲಿ ಕೊರೊನಾ ಬಗ್ಗೆ ಬೆಂಬಲಿಗರೊಂದಿಗೆ ಜಾಗೃತಿ ಮೂಡಿಸುವಾಗ ರೇಣುಕಾಚಾರ್ಯರಿಗೆ ಈ ವೇಳೆ ನೀವು ಇಲ್ಲಿಗೆ ಯಾಕೆ ಬಂದ್ರಿ? ಮೊದಲು ಹೋಗಿ ಎಂದು ಡಿಸಿ ತರಾಟೆ ತೆಗೆದುಕೊಂಡಿದ್ದರು.