ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ಮೃತ ಚಂದ್ರಶೇಖರ್ ಅಂತಿಮ ದರ್ಶನ ಪಡೆದರು.
ಬಳಿಕ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚಂದ್ರು ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆಂದು ತಿಳಿಸಿದ್ದಾರೆ. ಪ್ರಕರಣದ ಹಿಂದೆ ಯಾರೇ ಆರೋಪಿಗಳಿದ್ದರೂ ಅವರನ್ನು ಬಂಧಿಸಲಾಗುವುದು. ಅಪರಾಧಿಗಳು ಇವತ್ತಲ್ಲಾ ನಾಳೆ ಸಿಕ್ಕೇ ಸಿಕ್ತಾರೆ. ಇಂದು ನಾನು ಬೆಂಗಳೂರಿಗೆ ತೆರಳುತ್ತಿದ್ದು, ಸಿಎಂ ಭೇಟಿಯಾಗಿ ಈ ಕುರಿತು ಸಮಗ್ರ ತನಿಖೆ ಮಾಡಿಸುವಂತೆ ಒತ್ತಾಯಿಸುತ್ತೇನೆ ಎಂದರು.
ಇದನ್ನೂ ಓದಿ: ಸಹಜ ಸಾವಲ್ಲ, ಅಪಘಾತವೂ ಅಲ್ಲ; ಇದು ಕಾಣದ ಕೈಗಳ ಕೆಲಸ: ಎಂ ಪಿ ರೇಣುಕಾಚಾರ್ಯ
ಈ ರೀತಿಯ ಅನಾಹುತ ಸಂಭವಿಸುತ್ತದೆ ಅಂತ ನಾವು ನಿರೀಕ್ಷೆ ಮಾಡಿರಲಿಲ್ಲ. ಅವನನ್ನು ಯಾರೋ ಅಪಹರಣ ಮಾಡಿದ್ದಾರೆಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳ್ತಿದ್ರು. ಅವರು ಹೇಳಿದಂತೆಯೇ ನಿಜವಾಗಿದ್ದು, ಇಂದು ಚಂದ್ರು ಶವ ಕಣ್ಣು ಮುಂದೆ ಇದೆ. ದೇವರು ಅವನ ಆತ್ಮಕ್ಕೆ ಶಾಂತಿ ಕರುಣಿಸಲಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ತುಂಗಾ ಕಾಲುವೆಗೆ ಬಿದ್ದ ಕಾರಿನಲ್ಲಿ ಅಣ್ಣನ ಮಗನ ಶವ ಪತ್ತೆ.. ಮುಗಿಲು ಮುಟ್ಟಿದ ರೇಣುಕಾಚಾರ್ಯ ಆಕ್ರಂದನ